ಮೂಡುಬಿದಿರೆಯ ಅಪಾಯಕಾರಿ ರಸ್ತೆ ತಿರುವುಗಳಲ್ಲಿ ಪುರಸಭೆಯಿಂದ ರಸ್ತೆ ವಿಭಜಿಸುವ ಸಾಧನ ಅಳವಡಿಕೆ

ಮೂಡುಬಿದಿರೆಯ ಅಪಾಯಕಾರಿ ರಸ್ತೆ ತಿರುವುಗಳಲ್ಲಿ ಪುರಸಭೆಯಿಂದ ರಸ್ತೆ ವಿಭಜಿಸುವ ಸಾಧನ ಅಳವಡಿಕೆ
ಮೂಡುಬಿದಿರೆ : ವಾಹನಗಳ ಸಂಚಾರಕ್ಕೆ ಮತ್ತು ಪಾದಾಚಾರಿಗಳಿಗೆ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಪುರಸಭೆಯು ಪೇಟೆಯ ಹಳೆ ಪೊಲೀಸ್ ಠಾಣೆ ಬಳಿ ಮತ್ತು ಕನ್ನಡ ಭವನದ ಬಳಿಯಲ್ಲಿ ರಸ್ತೆ ವಿಭಜಿಸುವ ಸಾಧನವನ್ನು ಅಳವಡಿಕೆ ಅಳವಡಿಸುವ ಮೂಲಕ ಸುಲಭ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. 
  ಬೆಳ್ತಂಗಡಿ, ಕಾಕ೯ಳ, ಶಿತಾ೯ಡಿ, ಬೆಳ್ಮಣ್ ನಿಂದ ಮೂಡುಬಿದಿರೆಗೆ ಬರುವ ಬಸ್ಸುಗಳು ಹಾಗೂ ಇತರ ವಾಹನಗಳು ಮೂಡುಬಿದಿರೆ ಪೇಟೆಗೆ ಬರಬೇಕಾದರೆ ಹಳೆ ಪೊಲೀಸ್ ಠಾಣೆಯ ಜಂಕ್ಷನ್ ಬಳಿಯಿಂದ ಹಾದು ಬರಬೇಕಾಗುತ್ತದೆ. ಇಲ್ಲಿ ಸಿಂಗಲ್ ರಸ್ತೆ ಆಗಿರುವುದರಿಂದ ನಾಲ್ಕು ಭಾಗಗಳಿಂದ ವಾಹನಗಳು ಬಂದು ಒಮ್ಮೆಲೆ ಸೇರುವುದರಿಂದ ವಾಹನ ದಟ್ಟಣೆ ಹೆಚ್ಚುತ್ತದೆ ಇದರಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ. 
ಇದಲ್ಲದೆ ಸ್ವರಾಜ್ಯ 
ಮೈದಾನ ಬಳಿ ಇರುವ ಕನ್ನಡ ಭವನದ ಮುಂಭಾಗದ ರಸ್ತೆಯು ಅಪಾಯಕಾರಿ ತಿರುವನ್ನು ಹೊಂದಿದ್ದು ಎದುರಿನಲ್ಲಿ ಬರುವ ವಾಹನಗಳು ಹತ್ತಿರಕ್ಕೆ ಬರುವ ತನಕ್ಕೆ ಗಮನಕ್ಕೆ ಬರುವುದಿಲ್ಲ ಇದರಿಂದಾಗಿ ಈ ರಸ್ತೆ ಬಳಿ ಈಗಾಗಲೆ ಹಲವು ಸಣ್ಣ ವಾಹನಗಳು ಅಪಘಾತಕ್ಕೆ ಒಳಗಾಗಿವೆ ಈ ಬಗ್ಗೆ ಸಾವ೯ಜನಿಕರು ಪುರಸಭೆಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರು. 
  ಇದನ್ನು ಗಂಭೀರವಾಗಿ ಪರಿಗಣಿಸಿರುವ ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರು ಕಳೆದ ವಾರ ಪೊಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ರಸ್ತೆಗಳಿಗೆ ಬ್ಯಾರಿಕೇಡ್ ಗಳನ್ನು ಅಳವಡಿಸಲು ಸ್ಥಳಗಳನ್ನು ಗುರುತಿಸಿದ್ದು ಬುಧವಾರ ರಾತ್ರಿ ಅಪಾಯಕಾರಿ ತಿರುವುಗಳನ್ನು ಹೊಂದಿರುವ ಸ್ಥಳಗಳಲ್ಲಿ ರಸ್ತೆ ವಿಭಜಿಸುವ ಸಾಧನಗಳನ್ನು ಅಳವಡಿಸುವ ಮೂಲಕ ವಾಹನಗಳ ಸಃಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Post a Comment

0 Comments