ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಗೌರವ ಸನ್ಮಾನ
ನಮ್ಮ ಊರು ಸ್ವಚ್ಛವಾಗಿರಲು, ನಮ್ಮ ಪರಿಸರ ಆರೋಗ್ಯಕರವಾಗಿರಲು ಪ್ರತಿದಿನವೂ ಮೌನವಾಗಿ ಶ್ರಮಿಸುವ ಪೌರಕಾರ್ಮಿಕರ ಸೇವೆ ಅಮೂಲ್ಯವಾದದ್ದು. ಅವರ ಪರಿಶ್ರಮವೇ ನಮ್ಮ ಸ್ವಚ್ಛ ಹಾಗೂ ಸುಂದರ ಬದುಕಿನ ಹಿಂದಿರುವ ನಿಜವಾದ ಶಕ್ತಿ.

ಈ ನಿಮಿತ್ತ ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ, ಇಂದು ಶ್ರೀ ರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ವತಿಯಿಂದ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಊರಿನ ಎಲ್ಲಾ ಪೌರಕಾರ್ಮಿಕರ ಮನೆಗಳಿಗೆ ಸ್ವತಃ ತೆರಳಿ, ಅವರ ನಿಸ್ವಾರ್ಥ ಸೇವೆ, ಕರ್ತವ್ಯನಿಷ್ಠೆ ಹಾಗೂ ಸಮಾಜದ ಸ್ವಚ್ಛತೆಗಾಗಿ ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಸ್ಮರಿಸಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಇದು ಕೇವಲ ಒಂದು ಸನ್ಮಾನವಲ್ಲ; ಪ್ರತಿದಿನವೂ ನಮ್ಮ ಊರಿನ ಸ್ವಚ್ಛತೆಗಾಗಿ ದುಡಿಯುವ ಆ ಶ್ರಮಜೀವಿಗಳ ಕೈಗಳಿಗೆ ನಾವು ಸಲ್ಲಿಸಿದ ಕೃತಜ್ಞತೆಯ ನಮನ. ನಮ್ಮ ಊರಿಗಾಗಿ ಮೌನವಾಗಿ ದುಡಿಯುವ ಪ್ರತಿಯೊಬ್ಬ ಪೌರಕಾರ್ಮಿಕರ ಸೇವೆಯೂ ಗೌರವಕ್ಕೆ ಅರ್ಹವಾಗಿದೆ. ಅವರ ಮನೆಬಾಗಿಲಿಗೆ ತೆರಳಿ ಗೌರವ ಸಲ್ಲಿಸಲು ನಮಗೆ ದೊರೆತ ಅವಕಾಶವೇ ನಮ್ಮ ಬಳಗಕ್ಕೆ ಹೆಮ್ಮೆಯ ಸಂಗತಿ ಎಂದು ಶ್ರೀ ರಾಮ ಗೆಳೆಯರ ಬಳಗ (ರಿ.), ಕೋಡಿ ಕನ್ಯಾಣ ಇದರ ಪ್ರಮುಖರು ಶ್ಲಾಘಿಸಿದರು.

Post a Comment

0 Comments

Advertisement