ಮೂಡುಬಿದಿರೆ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜುಮ್ಮಾ ಮಸೀದಿಗಳ ಪ್ರತಿನಿಧಿಗಳ ‘ಮೂಡುಬಿದಿರೆ ವಲಯ ಸಂಯುಕ್ತ ಜಮಾತ್’ ಅಧ್ಯಕ್ಷರಾಗಿ ಮೂಡುಬಿದಿರೆ ಟೌನ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ( ಅಬ್ಬುವಾಕ ) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಮರೋಡಿ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮೂಡುಬಿದಿರೆ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಮಿತಿಯ ಗೌರವ ಸಲಹೆಗಾರರನ್ನಾಗಿ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ,ಮುಹಮ್ಮದ್ ಶರೀಫ್ ದಾರಿಮಿ,ಮೂಡುಬಿದಿರೆ, ಮೂಸಾ ದಾರಿಮಿ,ತೋಡಾರ್ ಹಾಗೂ ಇಬ್ರಾಹಿಂ ದಾರಿಮಿ ಹಂಡೇಲ್ ಅವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಎಚ್.ಎಂ.ಅಬ್ದುಲ್ ಖಾದರ್ ಹಾಜಿ ಹಂಡೇಲ್,ಉಪಾಧ್ಯಕ್ಷರಾಗಿ ಅಶ್ರಫ್ ಹಾಜಿ ಗುತ್ತು,ನಜೀಮುದ್ದೀನ್ ಅಂಗರಕರ್ಯ,ಮುಹಮ್ಮದ್ ಗಂಟಾಲ್ಕಟ್ಟೆ,ದಾವೂದ್ ಕಾಶಿಪಟ್ಣ, ಕೋಶಾಧಿಕಾರಿಯಾಗಿ ಝಕರಿಯಾ ಯೂಸುಫ್ ವಾಲ್ಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಲಿಯಾಕತ್ ಆಲಿ ಜ್ಯೋತಿನಗರ,ಅಬೂಬಕ್ಕರ್ ಗುಂಡುಕಲ್ಲು,ಶಂಸುದ್ದೀನ್ ತೇರೆಬಿದಿ, ಪ್ರಚಾರ ಸಮಿತಿ ಸದಸ್ಯರಾಗಿ ಮುಹಮ್ಮದ್ ಶಾಫಿ ಕಿರೋಡಿ, ತಸ್ರೀಫ್ ಮರಿಯಾಡಿ ಹಾಗೂ ಸದಸ್ಯರನ್ನಾಗಿ ಎಂ.ಎ.ಎಸ್.ಆಸಿಫ್ ತೋಡಾರ್, ಮುಹಮ್ಮದ್ ನದೀಮ್ ಪುತ್ತಿಗೆ,ಅಬ್ದುಲ್ ಗಫೂರ್ ಕೋಟೆಬಾಗಿಲು,ಶಬೀರ್ ಹಂಡೇಲ್,ಎಚ್.ಎಂ.ಅಬ್ದುಲ್ ರಝಾಕ್, ಇಸ್ಮಾಯಿಲ್ ನಸೀಮ, ಅಬ್ದುಲ್ ರಝಾಕ್ ಸಚ್ಚರಿಪೇಟೆ,ಫಾರೂಕ್ ಹೊಕ್ಕಾಡಿ, ಇಮ್ತಿಯಾಝ್ ಗಂಟಾಲ್ಕಟ್ಟೆ, ರಝಾಕ್ ಹೊಸಂಗಡಿ,ಶರೀಫ್ ಪೆರಾಡಿ, ಶಾಕಿರ್ ಪುತ್ತಿಗೆ,ಅಬ್ದುಲ್ ಖಾದರ್ ಮಕ್ಕಿ, ನಾಸಿರ್ ಅಂಗರಕರ್ಯ,ಅಬ್ದುಲ್ ರಝಾಕ್ ಬಾರ್ದಿಲ,ಹನೀಫ್ ಸಚ್ಚರಿಪೇಟೆ ಹಾಗೂ ಇಲ್ಯಾಸ್ ತೇರೆಬಿದಿ ಅವರನ್ನು ಆಯ್ಕೆ ಮಾಡಲಾಯಿತು.

0 Comments