ಬೆಳುವಾಯಿ : ಸಿಂಚನ ಜ್ಞಾನವಿಕಾಸ ಕೇಂದ್ರದ ಸ್ವಉದ್ಯೋಗ ಪ್ರೇರಣಾ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment
ಬೆಳುವಾಯಿ : ಸಿಂಚನ ಜ್ಞಾನವಿಕಾಸ ಕೇಂದ್ರದ ಸ್ವಉದ್ಯೋಗ ಪ್ರೇರಣಾ ಶಿಬಿರ
 ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು 
 ಇದರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೆಳುವಾಯಿ ವಲಯದ ಕರಿಯನಂಗಡಿ ಕಾರ್ಯಕ್ಷೇತ್ರದ ಸಿಂಚನ ಜ್ಞಾನವಿಕಾಸ ಕೇಂದ್ರದ ಸ್ವಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವು ಕುಕ್ಕುಡೆಲು ಮರಾಟಿ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು. 
 
ತಾಲೂಕು ಯೋಜನಾಧಿಕಾರಿ ಧನಂಜಯ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಆದಂತಹ ಸ್ವಉದ್ಯೋಗಗಳು ಇತರರಿಗೆ ಮಾದರಿ. ಇನ್ನು ಮುಂದೆಯೂ ಇಂತಹ ಉತ್ತಮ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.  

ವಲಯ ಅಧ್ಯಕ್ಷೆ ಬಬಿತ ಅವರು ಅಧ್ಯಕ್ಷತೆ ವಹಿಸಿದ್ದರು.

   ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ಅವರು ಮಾತನಾಡಿ ರುಡ್ ಸೆಟ್ ಸಂಸ್ಥೆಯ ಸ್ಥಾಪನೆ ಹಾಗೂ ಕಾರ್ಯವೈಖರ್ಯ, ನೀಡುವಂತಹ ಉತ್ತಮ ಸ್ವಉದ್ಯೋಗ ತರಬೇತಿಗಳ ಬಗ್ಗೆ, ಸೌಲಭ್ಯಗಳ ಬಗ್ಗೆ, ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು, 

   ಸ್ಥಳೀಯ ಜೋಹರಾ ಸಂಪ್ರದಾಯಿಕ ತಿನಿಸು ಇದರ ಮಾಲೀಕರಾದ ಶೇಖ್ ಸಾಹಿಲ್ ಅವರು ಮಾತನಾಡಿ ಮಹಿಳೆಯರು ಕೂಡ ಸ್ವಉದ್ಯೋಗವನ್ನು ಮಾಡುವುದರಿಂದ ಕುಟುಂಬದ ಆರ್ಥಿಕ ಮಟ್ಟವು ಎತ್ತರಕ್ಕೆ ಬೆಳೆಯುತ್ತದೆ. ಮಹಿಳೆಯರು ಸ್ವಾವಲಂಬಿಗಳಾಗಿರುತ್ತಾರೆ. ಸ್ವಉದ್ಯೋಗ ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳಿ ಎಂದ ಅವರು ಮನೆಯಲ್ಲಿ ಮಾಡಬಹುದಾದ ಸ್ವ ಉದ್ಯೋಗಗಳಾದ ಮಸಾಲ ಹುಡಿ ತಯಾರಿ,ಉಪ್ಪಿನಕಾಯಿ,ಜೇನು ಕೃಷಿ, ಅಡಿಕೆ ಕೃಷಿ, ತೆಂಗಿನ ಕೃಷಿ, ಆಡು ಸಾಕಣೆ, ಹೈನುಗಾರಿಕೆ,ಹೈನುಗಾರಿಕೆಯ ಇತರ ಉತ್ಪನ್ನಗಳ ಬಗ್ಗೆ, ಇತ್ಯಾದಿ ಸಣ್ಣಪುಟ್ಟ ಉದ್ಯೋಗಗಳನ್ನು ಮಾಡುವ ಬಗ್ಗೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. 

ಸೇವಾ ಪ್ರತಿನಿಧಿ ವಿದ್ಯಾ ಸ್ವಾಗತಿಸಿದರು. ಸಮನ್ವಯಾಧಿಕಾರಿ ವಿನುತಾ ಕಾರ್ಯಕ್ರಮವನ್ನು ನಿರೂಪಿಸಿದರು. ವಲಯದ ಮೇಲ್ವಿಚಾರಕಿ ಯಶೋದಾ ವಂದಿಸಿದರು.

Post a Comment

0 Comments