ಬಂಟರ ಮಹಿಳಾ ಘಟಕದಿಂದ "ತುಳು ಗೀತೆಗಳು ಗಾಯನ ಸ್ಪರ್ಧೆ ಹಾಗೂ ಆಟಿದ ಗೊಬ್ಬು ಪಂಥ"

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಬಂಟರ ಮಹಿಳಾ ಘಟಕದಿಂದ "ತುಳು ಗೀತೆಗಳು ಗಾಯನ ಸ್ಪರ್ಧೆ ಹಾಗೂ ಆಟಿದ ಗೊಬ್ಬು ಪಂಥ" 
ಮೂಡುಬಿದಿರೆ : ಬಂಟರ ಸಂಘ ಮೂಡುಬಿದಿರೆ, ಬಂಟರ ಮಹಿಳಾ ಘಟಕ ಇದರ ವತಿಯಿಂದ 
"ತುಳು ಗೀತೆಗಳು ಗಾಯನ ಸ್ಪರ್ಧೆ ಹಾಗೂ ಆಟಿದ ಗೊಬ್ಬು ಪಂಥ" ಕಾಯ೯ಕ್ರಮವು ಭಾನುವಾರ ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ ಸಭಾ ಗೃಹದಲ್ಲಿ ನಡೆಯಿತು. 
ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ. 9ರಂದು ವಿದ್ಯಾಗಿರಿಯಲ್ಲಿರುವ ಮೋಹಿನಿ ಅಪ್ಪಾಜಿ ನಾಯಕ್ ವೇದಿಕೆಯಲ್ಲಿ ನಡೆಯಲಿರುವ "ಆಟಿಡೊಂಜಿ ದಿನ-2026" ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

 ಮುಖ್ಯ ಅತಿಥಿಗಳಾಗಿ ಪ್ರಕಾಶಿನಿ ವಿನಯ್ ಹೆಗ್ಡೆ, ಡಾ. ಗ್ರೀಷ್ಮಾ ವಿವೇಕ್ ಆಳ್ವ, ದಿವ್ಯಾ ವಿನಯ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 ಕಾರ್ಯದರ್ಶಿ ಸಂಗೀತ ಶೆಟ್ಟಿ , ಕೋಶಾಧಿಕಾರಿ ಗೀತಾ ಪಿ. ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಅಮೃತ ಪಿ.ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Post a Comment

0 Comments

Advertisement