*ಸರಕಾರ ಲಕ್ಯಾ ಅಣೆಕಟ್ಟನ್ನು ಅಭಿವೃದ್ಧಿ ಪಡಿಸಿದರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
ಮೂಡುಬಿದಿರೆ : ಕೆಐಓಸಿಎಲ್ ಲಿಮಿಟೆಡ್ ವತಿಯಿಂದ ೧೯೭೩ರಲ್ಲಿ ಕಬ್ಬಿಣದ ಗಣಿಗಾರಿಕೆಯನ್ನು ಕುದುರೆಮುಖದಲ್ಲಿ ಪ್ರಾರಂಭಿಸಿದ್ದು, ಆ ಗಣಿಗಾರಿಕೆಯನ್ನು ಶುದ್ಧಗೊಳಿಸುವ ನಿಟ್ಟಿನಲ್ಲಿ ಲಕ್ಯಾ ಎಂಬ ಊರಿನಲ್ಲಿದ್ದ ಲಕ್ಯಾ ಹಳ್ಳಕ್ಕೆ ಅಣೆಕಟ್ಟು ನಿರ್ಮಾಣ ಮಾಡಲಾಯಿತು. ಇದರೊಂದಿಗೆ ತನ್ನ ಸ್ವಾರ್ಥಕ್ಕೆ ಗಣಿಗಾರಿಕೆಯ ಶುದ್ಧಪಡಿಸಿದ ರಾಡಿಯನ್ನು ಮರಳಿ ಅಣೆಕಟ್ಟೆಗೆ ಹಾಕುವ ಮೂಲಕ, ಈಗ ಈ ಅಣೆಕಟ್ಟು ಮಣ್ಣಲ್ಲಿ ಮಣ್ಣಾಗಿದೆ.
೧೯೭೩ರಲ್ಲಿ ಮೊದಲ ಬಾರಿಗೆ ೬೦ ಮೀಟರ್ ಎತ್ತರಕ್ಕೆ ನಿರ್ಮಿಸಿದ ಈ ಅಣೆಕಟ್ಟು ಬಳಿಕ ೧೯೮೯ರಲ್ಲಿ ನವದೆಹಲಿಯ ಮೆ. ಜಯಪ್ರಕಾಶ್ ಇಂಡಸ್ಟ್ರಿಸ್ ಲಿಮಿಟೆಡ್ ನವರು ೧೦೦ ಮೀಟರ್‌ಗೆ ಏರಿಸಿದರು.
ಕೆಐಓಸಿಎಲ್‌ನವರು ಕಬ್ಬಿಣವನ್ನು ಶುದ್ಧಮಾಡಿದ ರಾಡಿಯನ್ನು ಮರಳಿ ಈ ಅಣೆಕಟ್ಟಿಗೆ ಹಾಕಿದ್ದರಿಂದ ಇಂದು ೧೦೦ ಮೀಟರ್ ಅಡಿ ಆಳವಿರಬೇಕಾದ ಅಣೆಕಟ್ಟು ಅರಣ್ಯಪ್ರದೇಶದಂತೆ ಮಾರ್ಪಟ್ಟಿದೆ. ಇದಕ್ಕೆ ಮುಖ್ಯ ಕಾರಣ ಶುದ್ಧಪಡಿಸಿದ ರಾಡಿಯಲ್ಲಿ ಕೆಲ ಮರಗಳ ಬೀಜವಿದ್ದು, ಮೊದಲಿಗೆ ಮೈದಾನವಾಗಿ ಕಾಣುತ್ತಿದ್ದ ಈ ಅಣೆಕಟ್ಟು, ಇಂದು ಅರಣ್ಯವಾಗಿ ಮಾರ್ಪಟ್ಟಿದೆ.
ಈ ಅಣೆಕಟ್ಟು ೩೪೦ ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿದು, ಇದರಲ್ಲಿ ೨೦೦ ಹೆಕ್ಟೇರ್ ಪ್ರದೇಶದಲ್ಲಿ ರಾಡಿ ತುಂಬಿಕೊಂಡಿದೆ. ಇನ್ನು ಉಳಿದ ಪ್ರದೇಶದಲ್ಲಿ ನೀರು ಇದ್ದು, ಅದರಲ್ಲಿ ಒಂದು ಭಾಗ ಭದ್ರಾ ನದಿಗೆ ಹೋಗುತ್ತಿದ್ದು, ಇನ್ನೊಂದೆಡೆ ಮಂಗಳೂರಿನಲ್ಲಿರುವ ಕೆಐಓಸಿಎಲ್ ಲಿಮಿಟೆಡ್ ಕೈಗಾರಿಕೆ ಪ್ಲಾಂಟ್‌ಗೆ ಮೊದಲು ಕಬ್ಬಿಣದ ಅದಿರನ್ನು ಕಳುಹಿಸಿಕೊಡುತ್ತಿದ್ದ ೪೨೫ ಮೀ. ಉದ್ದದ ‘ಡಿ’ ಆಕಾರದ ೪.೦*೩.೭೫ ಮೀಟರ್ ಉದ್ದದ ಸುರಂಗ ಕೋಡಿಯ ಪೈಪ್‌ಲೈನ್ ಮೂಲಕ ಈಗ ನೀರನ್ನು ಕಳುಹಿಸಿಕೊಡಲಾಗುತ್ತಿದೆ.
ಈ ಅಣೆಕಟ್ಟಿನಲ್ಲಿರುವ ರಾಡಿಯನ್ನು ತೆರವುಗೊಳಿಸಿದಲ್ಲಿ ಪ್ರತೀ ವರ್ಷ ಬೇಸಿಗೆಕಾಲದಲ್ಲಿ ಮಂಗಳೂರಿನಲ್ಲಿ ಕಾಣಿಸಿಕೊಳ್ಳುವ ಕುಡಿಯುವ ನೀರಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದಾಗಿದೆ. ಈಗಾಗಲೇ ಲಕ್ಯಾ ಅಣೆಕಟ್ಟಿನಿಂದ ಮಂಗಳೂರಿನಲ್ಲಿರುವ ಕೆಐಓಸಿಎಲ್ ಪ್ಲಾಂಟ್‌ಗೆ ಪೈಪ್‌ಲೈನ್ ಮೂಲಕ ನೀರು ಬರುತ್ತಿದ್ದು, ಇದನ್ನು ಸೂಕ್ತ ರೀತಿಯಲ್ಲಿ ಯೋಜನೆಯನ್ನು ರೂಪಿಸಿ, ಮಂಗಳೂರಿನ ನಿವಾಸಿಗಳಿಗೆ ನೀರು ವಿತರಿಸುವ ನಿಟ್ಟಿನಲ್ಲಿ ಕಾರ್ಯ ರೂಪಿಸಿದಲ್ಲಿ ಹಲವು ವರ್ಷಗಳ ಸಮಸ್ಯೆಗೆ ದೊಡ್ಡ ಮಟ್ಟದಲ್ಲಿ ಪರಿಹಾರ ಕಂಡುಕೊಂಡಂತಾಗುತ್ತದೆ.
೧೯೭೩ರಲ್ಲಿ ಅರಣ್ಯ ಇಲಾಖೆಯು ೩,೩೦೦ ಎಕ್ಕರೆ ಪ್ರದೇಶವನ್ನು ೨೫ ವರ್ಷಗಳಿಗೆ ಗಣಿಗಾರಿಕೆ ಮಾಡಲು ಗುತ್ತಿಗೆಯನ್ನು ನೀಡಿದ್ದು, ಈ ಪ್ರದೇಶದಲ್ಲಿಯೇ ಲಕ್ಯಾ ಅಣೆಕಟ್ಟು ನಿರ್ಮಾಣವಾಗಿದ್ದು, ಸದ್ಯ ಇದು ಅರಣ್ಯ ಇಲಾಖೆಯ ಕೈಯಲ್ಲಿದೆ. ಇದರ ಬಗ್ಗೆ ಸರ್ಕಾರವು ಗಮನ ಹರಿಸಿ, ರಾಡಿ ತೆರವುಗೊಳಿಸಿ ಮತ್ತೆ ಈ ಪ್ರದೇಶದಲ್ಲಿ ನೀರು ಸಂಗ್ರಹಿಸುವ ಯೋಜನೆಯನ್ನು ರೂಪಿಸಿದಲ್ಲಿ ಬಹಳಷ್ಟು ಉಪಯುಕ್ತವಾಗಲಿದೆ.
*ಚಾರಣಕ್ಕೆ ಆಲ್‌ಲೈನ್ ಬುಕ್ಕಿಂಗ್‌ನಿಂದ ೫೫೦ ಮಂದಿಗೆ ಉದ್ಯೋಗ:
ಕುದುರೆಮುಖದಲ್ಲಿ ಗಂಗ್ಡಿಕಲ್ಲು, ಕುರಿಂಜಾಲ್ ಹಾಆಗೂ ಕುದುರೆಮುಖ ಎಂಬ ಮೂರು ಚಾರಣದ ಸ್ಥಳಗಳು ಹಾಗೂ ಸಫಾರಿಯೂ ಇದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗಳು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡು ಇಲ್ಲಿಗೆ ಬರುತ್ತಿದ್ದು, ಒಂದು ಚಾರಣ ಸ್ಥಳಕ್ಕೆ ದಿನಕ್ಕೆ ೩೦೦ ಜನರಿಗೆ ಅವಕಾಶವಿ ಕಲ್ಪಿಸಲಾಗಿದೆ. ೧೦ ಜನರಿಗೆ ಓರ್ವ ಸಲಹೆಗಾರರನ್ನು ನೇಮಿಸುತ್ತಿದ್ದು, ಚಾರಣಕ್ಕೆ ೪೭೫ ರೂ. ಹಾಗೂ ಸಲಹೆಗಾರರಿಗೆ ೧೦೦೦ ರೂ. ಫೀಸ್ ನಿಗದಿಯಾಗಿದೆ.
ಇಲ್ಲಿ ೨೦೦ ಜನ ಸ್ಥಳೀಯ ನಿವಾಸಿಗಳನ್ನು ಸಲಹೆಗಾರರಾಗಿ ಹಾಗೂ ೩೫೦ ಜನರನ್ನು ಗಾರ್ಡ್‌ಗಳಾಗಿ ನೇಮಿಸಿಕೊಳ್ಳಲಾಗಿದ್ದು, ಕಳೆದ ೨ ವರ್ಷಗಳಿಂದ ಚಾರಣಕ್ಕೆ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುತ್ತಿದ್ದು, ಪ್ರತೀ ವರ್ಷ ೫ ಕೋಟಿಗೂ ಅಧಿಕ ಆದಾಯ ಬರುತ್ತಿದ್ದು, ಅದರಲ್ಲಿ ೪೦ಶೇ. ಆದಾಯವನ್ನು ಇವರುಗಳಿಗೆ ವೇತನವಾಗಿ ನೀಡುತ್ತಿದ್ದು, ಉಳಿದ ೬೦ಶೇ. ಆದಾಯವನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಮನೆಯ ಹತ್ತಿರ ತೋಟ-ಗದ್ದೆ ಕೆಲಸದೊಂದಿಗೆ ಇಲ್ಲಿಯೂ ಕೆಲಸ ಸಿಕ್ಕಂತಾಗಿದ್ದು, ಬದುಕು ಉಜ್ವಲಗೊಂಡಿದೆ.
*ಅಣೆಕಟ್ಟು ೧೦೪೮ ಮೀಟರ್ ಉದ್ದವಿದ್ದು, ೧೦೦ ಮೀಟರ್ ಎತ್ತರವಿದೆ. ೧೮.೭೦ ಚದರ ಕಿ.ಮೀ. ಜಲಾನಯನ ಪ್ರದೇಶವಿದ್ದು, ೫.೭೨ ಚದರ ಕಿ.ಮೀ. ಜಲಾಶಯನದ ವಿಸ್ತೀರ್ಣವನ್ನು ಹೊಂದಿದೆ. ಪ್ರಮಾಣ ೨೪೫ ಮೀ. ಘನ ಮೀ. ಇದ್ದು, ಒಟ್ಟು ಮಣ್ಣಿನ ಕೆಲಸ ೧೧.೦ ಮೀ.ಘನ ಮೀ. ಆದಿದೆ. ಈ ಅಣೆಕಟ್ಟಿನ ಮೇಲ್ಮಟ್ಟ ೮೯೦ ಮೀಟರ್ ಆಗಿದ್ದು, ಪೂರ್ಣ ಜಲಾಶಯದ ಮಟ್ಟ ೮೮೫ ಮೀಟರ್ ಆಗಿದೆ.
*ಹನುಮಾನಗುಂಡಿ ಜಲಪಾತ:
ಹನುಮಾನಗುಂಡಿ (ಸೂತನಬ್ಬಿ) ಜಲಪಾತವು ಕುದುರೆಮುಖ ಉದ್ಯಾನವನದಲ್ಲಿ ಒಂದು ವಿಶ್ಮಯವಾದ ತಾಣವಾಗಿದ್ದು, ಇದು ಮುಖ್ಯ ರಸ್ತೆಯಿಂದ ೧೦೦ ಅಡಿ ಕೆಳಗಿದ್ದು, ಅಲ್ಲಿ ೨೨ ಅಡಿ ಎತ್ತರದಿಂದ ನೀರು ದುಮುಕುತ್ತಿದ್ದು, ಇದನ್ನು ನೋಡಿ ಕಣ್ತುಂಬಿಕೊಳ್ಳುವುದರೊಂದಿದೆ, ನಮ್ಮನ್ನು ಒಂದು ಕ್ಷಣ ಮರೆಸುತ್ತದೆ. ಇದು ನಂತರದಲ್ಲಿ ತುಂಗಾ ನದಿಯನ್ನು ಸೇರುತ್ತದೆ.
*ಕುದುರೆಮುಖದಲ್ಲಿ ಮೂರು ನದಿಗಳ ಉಗಮಸ್ಥಾನ
ಈ ಪ್ರದೇಶದಲ್ಲಿ ಕೇವಲ ಒಂದು ಕಿ.ಮೀ. ದೂರದಲ್ಲಿ ತುಂಗಾ, ಭದ್ರಾ ಹಾಗೂ ನೇತ್ರಾವತಿ ನದಿಗಳ ಉಗಮಸ್ಥಾನಗಳಾಗಿದ್ದು, ದಕ್ಷಿಣ ಕರ್ನಾಟಕದ ಮುಖ್ಯ ನದಿಗಳ ಜಲಮೂಲವಾದೆ. ನೇತ್ರಾವತಿ ನದಿ ಉಜಿರೆಯ ಮೂಲಕ ಕರಾವಳಿ ಭಾಗಕ್ಕೆ ಹರಿಯುತ್ತಿದ್ದರೆ, ತುಂಗಾ-ಭದ್ರಾ ನದಿ ಇಲ್ಲಿ ಬೇರೆಡೆ ಹರಿದು ಮತ್ತು ಒಟ್ಟಿಗೆ ಸೇರಿ ಸಮುದ್ರವನ್ನು ಸೇರುತ್ತಿವೆ.
*ಸುಧಾರಣೆಗೊಳ್ಳಬೇಕಿದೆ ರಸ್ತೆ:
ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಹಾಗೂ ವಾಹನಗಳು ಈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದು, ಎಸ್‌ಕೆ ಬಾರ್ಡರ್‌ನಿಂದ ಕಳಸದ ವರೆಗೆ ರಸ್ತೆ ಸಂಪೂರ್ಣ ಗುಂಡಿಗಳಿಂದ ಹಾಳಾಗಿದ್ದು, ಈ ರಸ್ತೆ ರಿಪೇರಿಯಾದಲ್ಲಿ ಪ್ರವಾಸಿಗರಿಗೆ ಉತ್ತಮ ರಸ್ತೆಯಾಗಿ ಸಂಚಾರಕ್ಕೆ ಅನುಕೂಲವಾಗಲಿದೆ.
-------------------------
ಕೂಡ್ಲುತೀಥ೯ ಫಾಲ್ಸ್, ಕೊಡಚಾದ್ರಿ, ಕುದುರೆಮುಖ ಟೆಕ್ಕಿಂಗ್ ಹಾಗೂ ಬೆಳ್ತಂಗಡಿ ಗಡಾಯಿಕಲ್ಲು ಸೇರಿದಂತೆ 2025-26ನೇ ಸಾಲಿನಲ್ಲಿ ಕುದುರೆಮುಖ ಫೌಂಡೇಶನ್ ಗೆ ಆನ್ ಲೈನ್ ಮೂಲಕ ಚಾರಣಿಗರಿಂದ 5.20 ಕೋಟಿ ರೂ ಸಂಗ್ರಹವಾಗಿದೆ. ಬಂದ ಹಣವನ್ನು ಪುನವ೯ಸತಿ, ಮೂಲಸೌಕಯ೯ ಅಭಿವೃದ್ಧಿ, ಸಿಬ್ಬಂದಿ ಕ್ವಾಟ೯ಸ್ ಹಾಗೂ ಸಣ್ಣಪುಟ್ಟ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತದೆ.
ಕುದುರೆಮುಖ ಏಂಟಿ ಪೋಚಿಂಗ್ ಕ್ಯಾಂಪ್ ನಡಿ 200 ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇಎಸ್ ಐ, ಇಪಿಎಫ್ ಜೊತೆಗೆ ರೇಷನ್ ಹಾಗೂ 16,700 ರೂ ವೇತನ ಒದಗಿಸಲಾಗುತ್ತಿದೆ: ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡುಬಿದಿರೆ ಉಪವಿಭಾಗ
____________________
ಕುದುರೆಮುಖ ಅರಣ್ಯ ವ್ಯಾಪ್ತಿಯ ಗಂಗಡಿಕಲ್, ಕುರಿಂಜಾಲು, ಕುದುರೆಮುಖ ಚಾರ

0 Comments