ಮಣಿಪಾಲದ ರತ್ನ ಸಂಜೀವ ಕಲಾಮಂಡಲದಲ್ಲಿ 'ಅಧಿಕಸ್ಯ ಅಧಿಕ ಫಲಂ' ಕಾರ್ಯಕ್ರಮ
ಅಧಿಕ ಮಾಸದಲ್ಲಿ ಭಗವದ್ಗೀತೆಯ 15ನೇ ಅಧ್ಯಾಯವನ್ನು 33 ಬಾರಿ ಪಠಿಸಿದರೆ ಪುರುಷೋತ್ತಮ ಫಲ ಸಿಗುತ್ತದೆ ಎಂಬ ಸನಾತನ ಧರ್ಮದ ನಂಬಿಕೆಯಂತೆ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಶ್ರೀ ಮಹೇಶ್ ಠಾಕೂರ್ ರವರ ನೇತೃತ್ವದ ಮಣಿಪಾಲದ ರತ್ನ ಸಂಜೀವ ಕಲಾಮಂಡಲದಲ್ಲಿ ಸಾಮೂಹಿಕ ಭಗವದ್ಗೀತೆ ಪಠಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀ ರಮಾನಂದ್ ಸಾಮಂತರು ಉದ್ಘಾಟಿಸಿದರು. ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಭಗವದ್ಗೀತೆ ಪ್ರವಚಕರಾದ ಶ್ರೀ ಉಮೇಶ್ ಕಾಮತ್ ರವರು ಅಧಿಕ ಮಾಸದಲ್ಲಿ ಭಗವದ್ಗೀತೆಯ ಪಠಣದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಶ್ರೀ ದುರ್ಗಾಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಪರ್ಕಳ ಇದರ ಅಧ್ಯಕ್ಷರಾದ ಶ್ರೀ ನರಸಿಂಹ ನಾಯಕ್ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಶುಭಾಸಂಶನೆಗೈದರು.
ಕಾರ್ಯಕ್ರಮದಲ್ಲಿ ಸಂಗೀತ ಮತ್ತು ಭಜನಾ ಗುರುಗಳಾದ ಶ್ರೀಮತಿ ಉಷಾ ಹೆಬ್ಬಾರ್, ಚಿತ್ರಕಲೆ ಗುರುಗಳಾಸ ಸುಮತಿ ಕಾಮತ್, ಹಾರ್ಮೋನಿಯಂ ಗುರುಗಳಾದ ನಿತ್ಯಾನಂದ ನಾಯಕ್, ತಬಲ ಗುರುಗಳಾದ ನಾಗರಾಜ್ ಕಾರ್ವಿ, ಭಗವದ್ಗೀತೆ ಬೋಧಕರಾದ ಉಮೇಶ್ ಕಾಮತ್ ಉಪಸ್ಥಿತರಿದ್ದರು. ಸ್ನೇಹ ಸಂಗಮ ಸರಳೇಬೆಟ್ಟು ಇದರ ಸಂಘಟನಾ ಕಾರ್ಯದರ್ಶಿ ಚೇತನಾ ಗಣೇಶ್ ರವರು ಸ್ವಾಗತಗೈದು ಕಾರ್ಯಕ್ರಮ ನಿರೂಪಿಸಿದರು.




0 Comments