ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ

ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ
ಉಜಿರೆ, ಜೂ.27 : ಧೀಮತಿ ಜೈನ ಮಹಿಳಾ ಸಮಾಜ, ಉಜಿರೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಕುಮಾರಿ ನಿಷ್ಠಾ ಜೈನ್ ಹಾಗೂ ಕುಮಾರಿ ದೀಪ್ತಾ ಜೈನ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷೆ ಡಾ. ರಜತಾ ಪಿ. ಶೆಟ್ಟಿ ಅಧ್ಯಕ್ಷೀಯ ವರದಿ ಮಂಡಿಸಿದರು. ನಿಕಟ ಪೂರ್ವ ಕಾರ್ಯದರ್ಶಿ ಶ್ರೀಮತಿ ದಿವ್ಯಾ ಪ್ರಧಾನ್ ಹಾಗೂ ಖಜಾಂಚಿ ಶ್ರೀಮತಿ ಸ್ಮಿತಾ ಪ್ರಶಾಂತ್ ಅವರು ಕಾರ್ಯ ಹಾಗೂ ಆರ್ಥಿಕ ವರದಿ ಸಲ್ಲಿಸಿದರು.

ಮುಖ್ಯ ಅತಿಥಿ ಹಾಗೂ ಗೌರವ ಅಧ್ಯಕ್ಷೆ ಶ್ರೀಮತಿ ಸೋನಿಯಾ ವರ್ಮಾ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ನಿಕಟ ಪೂರ್ವ ಪದಾಧಿಕಾರಿಗಳು ನೂತನ ಅಧ್ಯಕ್ಷೆ ಶ್ರೀಮತಿ ಅಶ್ವಿನಿ ಪ್ರವೀಣ್ ಕುಮಾರ್, ಕಾರ್ಯದರ್ಶಿ ಶ್ರೀಮತಿ ಸ್ಮೃತಿ ವಿನಯಚಂದ್ರ ಹಾಗೂ ಖಜಾಂಚಿ ಶ್ರೀಮತಿ ಉಲ್ಲಾಸಿನಿ ಉದಯ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕುಮಾರಿ ಲಾಸ್ಯ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 18 ನೂತನ ಸದಸ್ಯೆಯರು ಸಮಾಜಕ್ಕೆ ಸೇರ್ಪಡೆಗೊಂಡರು. ಮಹಿಳಾ ಸಮಾಜದ ಸದಸ್ಯೆ ಶ್ರೀಮತಿ ಶಶಿಪ್ರಭಾ ಇವರು ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಶ್ರೀಮತಿ ಸ್ಮೃತಿ ವಿನಯಚಂದ್ರ ವಂದನಾರ್ಪಣೆ ಸಲ್ಲಿಸಿದರು.

Post a Comment

0 Comments

Advertisement