ಪ್ರೇರಣಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಜಾಹೀರಾತು/Advertisment
ಜಾಹೀರಾತು/Advertisment
ಪ್ರೇರಣಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
           ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ " ವಿಶ್ವ ಪರಿಸರ ದಿನಾಚರಣೆ " ಯನ್ನು ಆಚರಿಸಲಾಯಿತು . ಮಂಗಳೂರು ವಲಯದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಅವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ನಂತರ ಮಾತನಾಡಿದ ಅವರು " ಪರಿಸರವು ನಮ್ಮ ಮೂಲಭೂತ ಅಗತ್ಯ ಆಗಿದೆ . ಪರಿಸರ ಸಂರಕ್ಷಣೆ ಮಾಡುವಲ್ಲಿ ಮರಗಳ ಪಾತ್ರ ಮಹತ್ವದ್ದಾದ ಕಾರಣ , ನಮ್ಮ ಅರಣ್ಯ ಇಲಾಖೆಯ ಮೂಲಕ , ಎಲ್ಲಾ ಶಾಲೆಗಳಲ್ಲಿ , ಗ್ರಾಮಗಳಲ್ಲಿ ಸಸಿ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು. " ಮಂಗಳೂರು ವಲಯದ ಉಪ ಅರಣ್ಯಾಧಿಕಾರಿ ಆನಂದ್ ಅವರು ಶುಭ ಹಾರೈಸಿದರು . 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ.ಶಾಂತರಾಮ ಕುಡ್ವ ಅವರು , " ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ . ನಮ್ಮ ತುಳುನಾಡಿನ ಹಬ್ಬಗಳ ಆಚರಣೆಯಲ್ಲಿ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ . ಆಟಿ ಅಮವಾಸ್ಯೆಯಂದು ಕಷಾಯ ಮಾಡುವುದು , ಕೆಡ್ಡಸ ಆಚರಣೆ , ತೆನೆ ಹಬ್ಬ , ಬಲಿ ಪಾಡ್ಯಮಿ ಮುಂತಾದ ಹಬ್ಬಗಳು ಪ್ರಕೃತಿಯ ಆರಾಧನೆಗೆ ಮಹತ್ವ ನೀಡುತ್ತಿವೆ . ನಾಗ ಬನ , ದೈವದ ಗರಡಿ ನಿರ್ಮಾಣ ಮಾಡಿ , ಅಲ್ಲಿ ವಿಶೇಷವಾದ ಸಸಿಗಳನ್ನು ನೆಡುವ ಕಾರ್ಯದ ಹಿಂದೆ , ಪರಿಸರದ ಕಾಳಜಿ ಇದೆ " ಎಂದರು . ಟ್ರಸ್ಟ್ ನ ಸದಸ್ಯ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.
            ಶಾಲಾ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.

Post a Comment

0 Comments