ಮೂಡುಬಿದಿರೆ ಪ್ರೇರಣಾ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಪ್ರೇರಣಾ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆqq
                ಮೂಡುಬಿದಿರೆ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಶಾಲೆಯ 280 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಯೋಗಭ್ಯಾಸದಲ್ಲಿ ಭಾಗವಹಿಸಿದರು.
 ಮೂಡುಬಿದಿರೆಯ ಪತಂಜಲಿಯ ಯೋಗ ಶಿಕ್ಷಕ ಶರತ್ ಅವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು . 
 ಶಾಲಾ ಸಂಚಾಲಕರಾದ ಶ್ರೀ ಎಂ.ಶಾಂತರಾಮ ಕುಡ್ವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು . 
 ಪತಂಜಲಿಯ ಯೋಗ ಶಿಕ್ಷಣದ ತಾಲೂಕು ಮಹಿಳಾ ಪ್ರಭಾರಿ ಸವಿತಾ ಅವರು ನಶಾಮುಕ್ತ ಭಾರತ ನಿರ್ಮಾಣದ ಸಂಕಲ್ಪ ತೊಡುವ ಪ್ರತಿಜ್ಞೆ ಬೋಧಿಸಿದರು . 
ಯೋಗ ಅಭ್ಯಾಸಿಗಳಾದ ಪವಿತ್ರಾ , ಜ್ಯೋತಿ ಅವರು ಉಪಸ್ಥಿತರಿದ್ದರು . 

ವತ್ಸಲಾ ರಾಜೇಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments