ಭೀಕರ ಸ್ಥಿತಿಯಲ್ಲಿ ಸಾವನ್ನಪ್ಪಿದ ದನ: ದಫನಗೈದ ಮೂಡುಬಿದಿರೆ ಪುರಸಭೆ

ಜಾಹೀರಾತು/Advertisment
ಜಾಹೀರಾತು/Advertisment
ಭೀಕರ ಸ್ಥಿತಿಯಲ್ಲಿ ಸಾವನ್ನಪ್ಪಿದ ದನ: ದಫನಗೈದ ಮೂಡುಬಿದಿರೆ ಪುರಸಭೆ
ಮೂಡುಬಿದಿರೆ: ತಾಲೂಕಿನ ಪುರಸಭಾ ವ್ಯಾಪ್ತಿಯ ವಿಶಾಲನಗರದ ರಸ್ತೆ ಬಳಿ ದನವೊಂದು ಭೀಕರ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಬುಧವಾರ ಬೆಳಗ್ಗೆ ಕಂಡು ಬಂದಿದೆ.
ದನದ ರುಂಡದ ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ದೇಹದ ವಿವಿಧ ಭಾಗಗಳಲ್ಲಿ ತರಚಿದ ರೀತಿಯ ಗಾಯಗಳಾಗಿದ್ದು ಕಂಡುಬಂದಿವೆ. ದನದ ಮೇಲೆ ಯಾರಾದರೂ ವಾಹನವನ್ನು ಚಲಾಯಿಸಿಕೊಂಡು ಹೋಗಿರಬಹುದೇ ಎಂಬ ಸಂಶಯ ಕಾಡುತ್ತಿದೆ ಆದರೆ ಸ್ಪಷ್ಟವಾಗಿಲ್ಲ.
ಮಾಹಿತಿ ತಿಳಿಯುತ್ತಿದ್ದಂತೆ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪುರಸಭೆ ಸಿಬ್ಬಂದಿಯ ಸಹಕಾರದೊಂದಿಗೆ ಮೃತ ದನವನ್ನು ದಫನ ಮಾಡಿದರು.

Post a Comment

0 Comments