ಮೂಡುಬಿದಿರೆ : ಪಾಳು ಬಿದ್ದ ಮನೆಯಲ್ಲಿ ಕೊಳೆತ ಶವ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ : ಪಾಳು ಬಿದ್ದ ಮನೆಯಲ್ಲಿ ಕೊಳೆತ ಶವ ಪತ್ತೆ

ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಗಂಡಸಿನ ಶವವೊಂದು ಕೊಳೆತ ಸ್ಥಿತಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಶವ ಕೊಳೆತು ದುರ್ನಾಥ ಬೀರುತ್ತಿದ್ದು ಕೆಲವು ದಿನಗಳ ಹಿಂದೆ ವ್ಯಕ್ತಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.
ನಾಪತ್ತೆಯಾಗಿದ್ದ ಸಾಕು ನಾಯಿಯನ್ನು ಹುಡುಕಾಡುತ್ತಿದ್ದಾಗ ಈ ಶವ ಪತ್ತೆಯಾಗಿದೆ.
ಕೇರಳ ಮೂಲದ ಚೇಟ ಎಂಬಾತನ ಶವವೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಅವರು ಭೇಟಿ ನೀಡಿದ್ದು ತ‌ನಿಖೆ ಮುಂದುವರಿಸಿದ್ದಾರೆ.

Post a Comment

0 Comments