ಮೂಡುಬಿದಿರೆ : ಬೆಳುವಾಯಿಯಿಂದ ಮೂಡುಬಿದಿರೆ ಕಡೆಗೆ ಕಲ್ಲು ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಬನ್ನಡ್ಕದಲ್ಲಿ ಸೋಮವಾರ ಪಲ್ಟಿಯಾಗಿದ್ದು ಚಾಲಕನಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿ ಬನ್ನಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಈ ಸಂದಭ೯ ಚಾಲಕ ಒಳಗಡೆ ಸಿಲುಕಿ ಹಾಕಿಕೊಂಡಿದ್ದು ನಂತರ ಕ್ರೈನ್ ಮೂಲಕ ಹೊರಗಡೆ ತೆಗೆಯಲಾಗಿದೆ.
ಶಾಸಕ ಕೋಟ್ಯಾನ್ ಭೇಟಿ : ಇದೇ ಸಂದಭ೯ದಲ್ಲಿ ಮಾನಾ೯ಡಿನಿಂದ ಮೂಡುಬಿದಿಗೆ ಕಡೆಗೆ ಬರುತ್ತಿದ್ದ ಶಾಸಕ ಉಮಾನಾಥ್ ಎ. ಕೋಟ್ಯಾನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
___________
ಕಳೆದ ಎರಡು ವಾರಗಳಿಂದ ದಿನಕ್ಕೊಂದರಂತೆ ಅಪಘಾತಗಳು, ಪ್ರಾಣ ಹಾನಿ ಈ ಹೆದ್ದಾರಿಯಲ್ಲಿ ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಇಲ್ಲಿ ಸವೀ೯ಸ್ ರಸ್ತೆಯ ಅಗತ್ಯವಿದೆ ಎಂದು ಸ್ಥಳೀಯರು ಶಾಸಕರು ಮತ್ತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಕಳೆದ ವಾರ ಮನವಿಯನ್ನು ನೀಡಿದ್ದರು. ಮನವಿಗೆ ಸ್ಪಂದಿಸಿದ್ದ ಸಂಸದರು ಕೂಡಾ ಸವೀ೯ಸ್ ರಸ್ತೆಯ ತುತು೯ ಅವಶ್ಯಕತೆಯ ಬಗ್ಗೆ ರಾ. ಹೆ. ಸಚಿವರಿಗೆ ಪತ್ರವನ್ನು ಬರೆದು ತಿಳಿಸಿದ್ದಾರೆ.


0 Comments