ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಗಾಣಿಗರ ಕ್ರೀಡಾಕೂಟ ಸಂಘಟನೆಗೆ ಕ್ರೀಡೆಗಳು ಪೂರಕ-ಶಂಕರ್ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆಯಲ್ಲಿ ಜಿಲ್ಲಾ ಮಟ್ಟದ ಗಾಣಿಗರ ಕ್ರೀಡಾಕೂಟ
*ಸಂಘಟನೆಗೆ ಕ್ರೀಡೆಗಳು ಪೂರಕ-ಶಂಕರ್ ಕೋಟ್ಯಾನ್
ಮೂಡುಬಿದಿರೆ: ಕ್ರೀಡೆಯು ಸಂಘಟನೆಗೆ ಪೂರಕವಾದುದು. ಯುವ ಪೀಳಿಗೆಯನ್ನು ಸಂಘಟನೆಯತ್ತ ಆಕರ್ಷಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾರ್ಯಕ್ರಮವಾಗಿದ್ದು, ಇಂತಹ ಚಟುವಟಿಕೆಗಳ ಮೂಲಕ ಸಂಘಟನೆಯನ್ನು ಬಲಪಡಿಸಲು ಸಾಧ್ಯವಿದೆ ಎಂದು ಮಾರುತಿ ಟೈರ್ ರಿಸೋಲಿಂಗ್ ಮಾಲೀಕ ಶಂಕರ ಎ. ಕೋಟ್ಯಾನ್ ಹೇಳಿದರು.

ಅವರು ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಹಾಗೂ ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ವತಿಯಿಂದ ಶ್ರೀ ಧವಳಾ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ವಿಭಾಗದ ತ್ರೋಬಾಲ್ ಹಾಗೂ ಶಟ್ಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಯುವಜನತೆಗೆ ಪ್ರೇರಣೆಯಾಗುವಂತಹ ಕಾರ್ಯಕ್ರಮವನ್ನು ಸಪಳಿಗ ಸಂಘ ಆಯೋಜಿಸಿದೆ.
ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಎಲ್ಲರನ್ನು ಒಟ್ಟುಗೂಡಿಸಿ ಸಂಘದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಕ್ರೀಡೆಗೆ ಪೋಷಕರು ಕೂಡ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡೆಯು ಆತ್ಮಸ್ಥೈರ್ಯ ಮತ್ತು ಮನೋಬಲವನ್ನು ಹೆಚ್ಚಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಗಾಣಿಗ ಯಾನೆ ಸಪಳಿಗರ ಸೇವಾ ಸಂಘದ ಅಧ್ಯಕ್ಷ ರಾಜೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಂಗ್ರಮಂಜೇಶ್ವರ ಶಾಸ್ತವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸೇಸಪ್ಪ ಸಾಲ್ಯಾನ್, ರವಿ ಅಲ್ಯುಮಿನಿಯಂ & ಫ್ಯಾಬ್ರಿಕೇಶನ್ ಮಾಲಕ ರವಿ ಪೂಜಾರಿ, ಅಶೋಕ್ ಸಪಳಿಗ, ಸಂಘದ ಗೌರವಾಧ್ಯಕ್ಷ ಡಾ. ಸತ್ಯಶಂಕರ್ ಪುತ್ರನ್, ಪ್ರಾಯೋಜಕ ಮುರಳೀದಾಸ್ ಕಾವೂರು, ಮಹಿಳಾ ವೇದಿಕೆಯ ಅಧ್ಯಕ್ಷೆ ಸುಜಯ ಬಂಗೇರ, ಪ್ರಮುಖರಾದ ಪ್ರತಾಪ್ ಬೆಟ್ಟೇರಿ, ನತೇಶ್ ಬಾರಾಡಿ, ಸುಕೇಶ್ ಬಾರಾಡಿ, ನವೀನ್ ಪುತ್ರನ್, ಸತೀಶ್ ಬಾರಾಡಿ, ಸಾರಿಕಾ ಬಂಗೇರ, ಸುಶ್ಮಿತಾ ರಂಜಿತ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಈಜುಪಟು ಶ್ರೀಲಕ್ಷ್ಮಿ ಗಾಣಿಗ ವಿಟ್ಲ ಅವರನ್ನು ಸನ್ಮಾನಿಸಲಾಯಿತು. ದಿಯಾ ಬಂಗೇರ ಸನ್ಮಾನಪತ್ರ ವಾಚಿಸಿದರು. ರೂಪಾ ಪ್ರದೀಪ್ ಕೋಟೆಬಾಗಿಲು ಕಾರ್ಯಕ್ರಮ ನಿರೂಪಿಸಿದರು. 

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ತಂಡಗಳು ತೀವ್ರ ಪೈಪೋಟಿ ನಡೆಸಿ ಪ್ರೇಕ್ಷಕರ ಗಮನ ಸೆಳೆದವು. ಮಹಿಳೆಯರ ತ್ರೋಬಾಲ್ ಪಂದ್ಯಾಟವೂ ಜರುಗಿತು. ಶಟ್ಲ್ ಪಂದ್ಯಾಟದಲ್ಲಿ 15 ವರ್ಷದೊಳಗಿನ ಬಾಲಕ-ಬಾಲಕಿಯರು ಹಾಗೂ 30 ವರ್ಷ ಮೇಲ್ಪಟ್ಟವರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಿಜೇತ ತಂಡಗಳು ಮತ್ತು ಆಟಗಾರರಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.

Post a Comment

0 Comments