ಗಾಳಿ ಮಳೆ: ಮೂಡುಕೊಣಾಜೆಯಲ್ಲಿ ಕೃಷಿ ಭೂಮಿ, ಆರು ಮನೆಗಳಿಗೆ ಹಾನಿ

ಜಾಹೀರಾತು/Advertisment
ಜಾಹೀರಾತು/Advertisment
ಗಾಳಿ ಮಳೆ: ಮೂಡುಕೊಣಾಜೆಯಲ್ಲಿ ಕೃಷಿ ಭೂಮಿ, ಆರು ಮನೆಗಳಿಗೆ ಹಾನಿ
ಮೂಡುಬಿದಿರೆ: ಮೂಡುಕೊಣಾಜೆ ಗ್ರಾಮದ ಅನೆಗುಡ್ಡೆ ಮತ್ತು ಅಗರಿ ಪ್ರದೇಶದಲ್ಲಿ ಕಳೆದ ರಾತ್ರಿ ಸಂಭವಿಸಿದ ಭಾರೀ ಗಾಳಿ, ಮಳೆಯಿಂದ ಕೃಷಿಭೂಮಿಗೆ ಹಾನಿಯುಂಟಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸಂತೋಷ್ ಸಲ್ದಾನ, ಲೀನಾ ಸಲ್ದಾನ ಹಾಗೂ ನೊಬರ್ಟ್ ಪಿರೇರಾ ಅವರಿಗೆ ಸೇರಿದ ತೋಟಗಳಿಗೆ ಹಾನಿಯಾಗಿದೆ. ಈ ತೋಟಗಳಿರುವ 
ಸಾವಿರಕ್ಕೂ ಆಧಿಕ ರಬ್ಬರ್ ಮರ, ಅಡಿಕೆ‌ಮರ ಹಾಗೂ ತೆಂಗಿನ ಮರಗಳು ನಾಶವಾಗಿದೆ. 6 ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. 6 ಮನೆಗಳು, ದನದ ಕೊಟ್ಟಿಗೆ ಹಾಗೂ ರಬ್ಬರ್ ಶೆಡ್ ಗಾಳಿಗೆ ಕುಸಿದು ಹಾನಿಗೊಳಗಾಗಿವೆ.

Post a Comment

0 Comments