ಬನ್ನಡ್ಕ: ಗಾಳಿ‌ಮಳೆಗೆ ಐಟಿಐ ಹಳೇ ಕಟ್ಟಡಕ್ಕೆ ಹಾನಿ, ದೈವಸ್ಥಾನದ ಆವರಣ ಗೋಡೆ ಕುಸಿತ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಬನ್ನಡ್ಕ: ಗಾಳಿ‌ಮಳೆಗೆ ಐಟಿಐ ಹಳೇ ಕಟ್ಟಡಕ್ಕೆ ಹಾನಿ, ದೈವಸ್ಥಾನದ ಆವರಣ ಗೋಡೆ ಕುಸಿತ
ಮೂಡುಬಿದಿರೆ: ಬನ್ನಡ್ಕದಲ್ಲಿ ಮೊನ್ನೆ ಬಿದ್ದ ಗೋಳಿಮರ (ಆಲದ ಮರ) ದಿಂದ ಪಕ್ಕದಲ್ಲಿ ಇದ್ದ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ) ದ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. 

ಮರ ಬಿದ್ದ ರಭಸಕ್ಕೆ ಕಟ್ಟಡದ ಮಾಡು ಮತ್ತು ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದರ ಬೆನ್ನಲ್ಲೇ ನಿನ್ನೆ ಬೀಸಿದ ಭಾರಿ ಗಾಳಿಗೆ ಬನ್ನಡ್ಕದ ದೈವಸ್ಥಾನದ ಆವರಣ ಗೋಡೆಯು ಬುಡ ಸಮೇತ ಕುಸಿದು ಬಿದ್ದಿದೆ. ಒಂದೆರಡು ದಿನಗಳ ಅಂತರದಲ್ಲಿ ನಡೆದಿರುವ ಈ ಘಟನೆಗಳಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರಸನ್ನ ಶೆಟ್ಟಿ ಬೆಲ್ಮನ್ ಪರಿಸ್ಥಿತಿಯನ್ನು ವೀಕ್ಷಿಸಿ ಮಾಹಿತಿ ನೀಡಿದ್ದಾರೆ.

Post a Comment

0 Comments

Advertisement