ಮೂಡುಬಿದಿರೆ: ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನದೊಂದಿಗೆ ವಸ್ತ್ರಲೋಕದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ 'ಜೀವಿಸ್ ಸಿಲ್ಕ್ ಆಂಡ್ ಸೇಜ್' ಮಳಿಗೆಯು ಮೇ 14ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಆಳ್ವಾಸ್ ರಸ್ತೆಯ ಮೆನೆಜಸ್ ಕಾಂಪ್ಲೆಕ್ಸ್‌ನಲ್ಲಿ ಲೋಕಾಪ೯ಣೆಗೊಳ್ಳಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ್ ಆಳ್ವ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಶ್ಮಿತಾ ಮೋಟಾರ್ಸ್‌ನ ಮೀನಾಕ್ಷಿ ನಾರಾಯಣ, ಮಿಜಾರು ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿ ಗ್ರೀಷ್ಮಾ ವಿವೇಕ್ ಆಳ್ವ, ಅರಿವಳಿಕೆ ತಜ್ಞೆ ಮಮತಾ ಗುರುಪ್ರಸಾದ್, ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ಶೆಟ್ಟಿ, ಶ್ರೀ ಕಾಳಿಕಾ ಡಿಜಿಟಲ್ ಪ್ರಿಂಟ್ಸ್‌ನ ಶಾಂತಲಾ ಆಚಾರ್ಯ ಹಾಗೂ ಬ್ರಹ್ಮತೇಜ ಮೂಡುಕೊಣಜೆಯ ಶಂಕರ್ ಕೋಟ್ಯಾನ್ ಉಪಸ್ಥಿತರಿರಲಿದ್ದಾರೆ ಎಂದು ಮಳಿಗೆಯ ಮಾಲಕಿ ಜೀವಿತಾ ಶಂಕರ್ ತಿಳಿಸಿದ್ದಾರೆ.


0 Comments