ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಕಿರಿಯ ರಥೋತ್ಸವ: ಸಾತ್ವಿಕ ಆಹಾರದಿಂದ ಆರೋಗ್ಯಪೂರ್ಣ ಸಮಾಜ: ಭಟ್ಟಾರಕ ಶ್ರೀ

ಜಾಹೀರಾತು/Advertisment
ಜಾಹೀರಾತು/Advertisment
ಮೂಡುಬಿದಿರೆ ಸಾವಿರ ಕಂಬದ ಬಸದಿಯಲ್ಲಿ ಕಿರಿಯ ರಥೋತ್ಸವ: ಸಾತ್ವಿಕ ಆಹಾರದಿಂದ ಆರೋಗ್ಯಪೂರ್ಣ ಸಮಾಜ: ಭಟ್ಟಾರಕ ಶ್ರೀ
ಮೂಡುಬಿದಿರೆ: ಮನುಷ್ಯನ ಮನಸ್ಸನ್ನು ನಿರ್ಮಲಗೊಳಿಸಲು ಯೋಗ, ಧ್ಯಾನ, ಜಪ ಹಾಗೂ ತಪಸ್ಸು ಅತಿ ಅಗತ್ಯವಾಗಿದ್ದು, ಸಸ್ಯಾಹಾರ ಹಾಗೂ ಸಾತ್ವಿಕ ಆಹಾರದ ನಿಯಮಿತ ಸೇವನೆಯಿಂದ ಶರೀರದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು. 
ಸಾವಿರ ಕಂಬದ ಬಸದಿಯಲ್ಲಿ ಬುಧವಾರ ರಾತ್ರಿ ನಡೆದ ಭಗವಾನ್ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ-ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
 
ಬಸದಿಗಳ ಮೊಕ್ತೇಸರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್ , ಸುದೀಶ್, ಆದರ್ಶ್, ಪ್ರಮುಖರಾದ ಹೇಮರಾಜ್, ಪ್ರವೀಣ್ ಚಂದ್ರ, ಪ್ರದೀಪ್ ಚಂದ್ರ ರಂಜನ್ ಪೊವಣಿ ಉಪಸ್ಥಿತರಿದ್ದರು.
ಬಳಿಕ ಭಗವಾನ್ ಚಂದ್ರಪ್ರಭ ಸ್ವಾಮಿಯ ಕಿರಿಯ ರಥೋತ್ಸವ ಹಾಗೂ 108 ಕಲಶಗಳ ಅಭಿಷೇಕ ವಿಧಿವಿಧಾನಗಳೊಂದಿಗೆ ನೆರವೇರಿತು.

Post a Comment

0 Comments