ಮೂಡುಬಿದಿರೆಯಲ್ಲಿ ನಮ್ಮ ನಾಡ ಒಕ್ಕೂಟದ ಸಮುದಾಯ ಕೇಂದ್ರ ಲೋಕಾರ್ಪಣೆ

ಮೂಡುಬಿದಿರೆಯಲ್ಲಿ ನಮ್ಮ ನಾಡ ಒಕ್ಕೂಟದ ಸಮುದಾಯ ಕೇಂದ್ರ ಲೋಕಾರ್ಪಣೆ 
 
ಮೂಡುಬಿದಿರೆ: ಕಮ್ಯುನಿಟಿ ಕೇಂದ್ರಗಳು ಶಿಕ್ಷಣ, ಉದ್ಯೋಗ ಮತ್ತು ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವೇದಿಕೆಯಾಗಲಿದೆ ಎಂದು ಎನ್.ಎನ್.ಒ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ರಿಜ್ವಾನ್ ಅಹ್ಮದ್ ಹೇಳಿದರು .

 ಅವರು ನಮ್ಮ ನಾಡ ಒಕ್ಕೂಟದ (ಎನ್.ಎನ್.ಒ) ವತಿಯಿಂದ ಮೂಡುಬಿದಿರೆ ತಾಲೂಕಿನಲ್ಲಿ ಸ್ಥಾಪಿಸಲಾದ ಎನ್.ಎನ್.ಒ ಮೂಡುಬಿದಿರೆ ಕಮ್ಯುನಿಟಿ ಸೆಂಟರನ್ನು ಗುರುವಾರ ಸಂಜೆ ಲೋಕಾಪ೯ಣೆಗೊಳಿಸಿ ಮಾತನಾಡಿ ಸಂಸ್ಥೆಯ ಉದ್ದೇಶಗಳು ಹಾಗೂ ಸಮುದಾಯ ಸೇವೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರುಗಳು ದುಆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   
ಎನ್.ಎನ್.ಒ ಟ್ರಸ್ಟಿಗಳಾದ ಸಾಕಿಬ್ ರಝಾ ಖಾನ್, ಮೊಹಮ್ಮದ್ ಹುಸೈನ್ ಕಾರ್ಕಳ, ಅಬ್ದುಲ್ ಹಮೀದ್ ಮತ್ತು ಮೊಹಮ್ಮದ್ ಇಸಾಕ್ ಭಾಗವಹಿಸಿದ್ದರು. 

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ರಫೀಕ್ ಮಾಸ್ಟರ್ ಸಂಘಟನೆಯ ಕಾರ್ಯಪದ್ಧತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಶೇಖ್ ನೂರುದ್ದೀನ್ ಸಮುದಾಯ ಕೇಂದ್ರದ ಗುರಿಗಳನ್ನು ವಿವರಿಸಿ ಎಲ್ಲರ ಸಹಕಾರ ಕೋರಿದರು.

 ಮುಂಬರುವ ದಿನಗಳಲ್ಲಿ ಮೂಡುಬಿದಿರೆ ಘಟಕವು ಸಮಾಜದ ಹಿತದೃಷ್ಟಿಯಿಂದ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದೆ ಎಂದು ಸಂಘಟಕರು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಘಟಕದ ಕಾರ್ಯದರ್ಶಿ ಅಬ್ದುಲ್ ರಝಾಕ್, ಖಜಾಂಚಿ ಎಲ್. ಆರ್. ರಿಜ್ವಾನ್ ಅಹ್ಮದ್, ಜಿಸಿಸಿ ಘಟಕದ ಪ್ರತಿನಿಧಿ ಮುಬೀನ್ ಅಹ್ಮದ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎನ್.ಎನ್.ಒ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Advertisement