ಪಕ್ಷ ಕಟ್ಟಲು ಕ್ರಾಂತಿಕಾರಿ ಹೆಜ್ಜೆಯಿಟ್ಟ ಬಿಜೆಪಿ ಜಿಲ್ಲಾಧ್ಯಕ್ಷರು:ದೇಶದಲ್ಲೇ ಮಂಗಳೂರು ಪ್ರಥಮ:ನಾಯಕರಿಂದ ಅಭಿನಂದನೆ

ಜಾಹೀರಾತು/Advertisment
ಜಾಹೀರಾತು/Advertisment

 ಪಕ್ಷ ಕಟ್ಟಲು ಕ್ರಾಂತಿಕಾರಿ ಹೆಜ್ಜೆಯಿಟ್ಟ ಬಿಜೆಪಿ ಜಿಲ್ಲಾಧ್ಯಕ್ಷರು:ದೇಶದಲ್ಲೇ ಮಂಗಳೂರು ಪ್ರಥಮ:ನಾಯಕರಿಂದ ಅಭಿನಂದನೆ

ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾದ ಸತೀಶ್ ಕುಂಪಲ ರವರು ಪಕ್ಷ ಸಂಘಟನೆಗೆ ವಿಭಿನ್ನ ಕಾರ್ಯತಂತ್ರವನ್ನು ರೂಪಿಸಿದ್ದು ರಾಷ್ಟ್ರ ಬಿಜೆಪಿಯಲ್ಲೇ ಪ್ರಥಮ ಹೆಜ್ಜೆಯಾಗಿದೆ. ಕೇಂದ್ರ, ರಾಜ್ಯ, ಜಿಲ್ಲೆ ಹಾಗೂ ಮಂಡಲಕ್ಕೆ ಸೀಮಿತವಾಗಿದ್ದ ಪದಾಧಿಕಾರಿಗಳ ಅಭ್ಯಾಸ ವರ್ಗವನ್ನು ಪಕ್ಷದ ಪ್ರತೀ ಶಕ್ತಿಕೇಂದ್ರಕ್ಕೂ ವಿಸ್ತರಿಸಿದ ದೇಶದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಶಕ್ತಿಕೇಂದ್ರ ಮಟ್ಟದಲ್ಲೇ ಪಕ್ಷವನ್ನು ಸೈದ್ಧಾಂತಿಕವಾಗಿ ಬಲಗೊಳಿಸಬೇಕೆಂಬ ವಿಭಿನ್ನ ಚಿಂತನೆಯೊಂದಿಗೆ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಕರವರು ಈ ಸಾಹಸಕ್ಕೆ ಕೈ ಹಾಕಿದ್ದು ಭಾಗಶಃ ಯಶಸ್ವಿಯಾಗಿದ್ದಾರೆ.

ಬಿಜೆಪಿಯ ಸಂಘಟನಾತ್ಮಕ ಹೆಜ್ಜೆಯಲ್ಲಿ ಅಭ್ಯಾಸ ವರ್ಗವು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. ಅಭ್ಯಾಸ ವರ್ಗಕ್ಕೆ ಪಕ್ಷವು ಅತೀವ ಪ್ರಾಮುಖ್ಯತೆಯನ್ನು ನೀಡುತ್ತದೆ. ಹೀಗಾಗಿ ಕೇಂದ್ರದಿಂದ ಮಂಡಲದವರೆಗೆ ಇದ್ದ ಅಭ್ಯಾಸ ವರ್ಗವನ್ನು ಇದೀಗ ಶಕ್ತಿಕೇಂದ್ರದವರೆಗೂ ವಿಸ್ತರಿಸಲಾಗಿದೆ.



 ಪ್ರತೀ ಶಕ್ತಿಕೇಂದ್ರ ಮಟ್ಟದಲ್ಲಿ ಅರ್ಧ ದಿನ ಅಭ್ಯಾಸ ವರ್ಗ ನಡೆಯುತ್ತದೆ. ಈ ವರ್ಗಕ್ಕೂ ಮುನ್ನ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಶಕ್ತಿಕೇಂದ್ರಕ್ಕೆ ವರದಿ ಒಪ್ಪಿಸಬೇಕು. ಪಕ್ಷದ ಜವಬ್ದಾರಿ ಇಲ್ಲದ ಹಿರಿಯರನ್ನೂ ಗೌರವಿಸಬೇಕು. ಭಿನ್ನಾಭಿಪ್ರಾಯ ಇದ್ದಲ್ಲಿ ಅವುಗಳನ್ನು ಸರಿಪಡಿಸಿ ನಂತರ ಅಭ್ಯಾಸ ವರ್ಗ ನಡೆಸಬೇಕು. ಪಕ್ಷದ ಸಿದ್ಧಾಂತದ ಬಗ್ಗೆ ಅರ್ಧ ದಿನ ಪಾಠ ಪ್ರವಚನಗಳನ್ನು ಮಂಡಲ ಅಧ್ಯಕ್ಷರಿಂದ ನಿಯೋಜಿತ ಪಕ್ಷದ ಹಿರಿಯರು ನಡೆಸಬೇಕು. ಮುಂದಿನ ಸಂಘಟನೆ ಬಗ್ಗೆ ಚರ್ಚಿಸಬೇಕು. ಜಾತಿ ಬೇಧ ಇಲ್ಲದೆ ಎಲ್ಲರೂ ಒಟ್ಟಾಗಿ ಊಟ ತಿಂಡಿ ಮಾಡಬೇಕು. ಹೀಗೆ ಹತ್ತು ಹಲವು ನಿಯಮಗಳನ್ನು ರೂಪಿಸಿ ತಳಮಟ್ಟದಿಂದಲೇ ಬೆಳೆದು ಬಂದು ಪಕ್ಷ ಸಂಘಟನೆ ಆಗಬೇಕೆಂಬ ಕ್ರಾಂತಿಕಾರಿ ಪ್ರಯತ್ನವನ್ನು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನಡೆಸಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. 



ದಕ್ಷಿಣ ಕನ್ನಡ ಜಿಲ್ಲೆ ಸಧ್ಯ ಎಂಟರಲ್ಲಿ ಆರು ಬಿಜೆಪಿ ಶಾಸಕರನ್ನು ಒಬ್ಬರು ಸಂಸದರನ್ನು ಮತ್ತು ಇಬ್ಬರು ವಿಧಾನ ಪರಿಷತ್ ಶಾಸಕರನ್ನು ಹೊಂದಿರುವ ಜಿಲ್ಲೆಯಾಗಿದೆ. ಸುದರ್ಶನ ಮೂಡುಬಿದಿರೆಯವರು ಪೂರ್ವ ಅಧ್ಯಕ್ಷರಾಗಿ ಉತ್ತಮ ಪಕ್ಷ ಸಂಘಟನೆ ನಡೆಸಿದ್ದರು. ನಂತರ ಜಿಲ್ಲಾಧ್ಯಕ್ಷರಾಗಿ ಬಂದ ಸತೀಶ್ ಕುಂಪಲ ರವರ ಅಧಿಕಾರದ ನಡಿಗೆ ಸುಲಭವಿಲ್ಲ. ಅದು ಮುಳ್ಳಿನ ಹಾಸಿಗೆ. ಒಂದು ಕಡೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಪಕ್ಷ ಸಂಘಟಿಸಬೇಕು. ಮತ್ತೊಂದು ಕಡೆ ಆಡಳಿತ ಪಕ್ಷದ ವಿರುದ್ಧ ಸಂಘಟಿತವಾದ ಹೋರಾಟವನ್ನು ರೂಪಿಸಬೇಕು. ಆಡಳಿತ ಪಕ್ಷದ ಹಲವಾರು ನಡೆಗಳು, ರಾಜ್ಯ ಮಟ್ಟದ ಪ್ರತಿಭಟನಾ ಸಭೆಗಳು,ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳು ಸೇರಿದಂತೆ ಅನೇಕ ಹೋರಾಟಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. 


ಸತೀಶ್ ಕುಂಪಲ ರವರ ಅನೇಕ ವಿಭಿನ್ನ ಹಾಗೂ ಹೊಸ ರೀತಿಯ ಕಾರ್ಯಶೈಲಿಗೆ ಕೇಂದ್ರದ ನಾಯಕರು ಮತ್ತು ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಶಕ್ತಿಕೇಂದ್ರ ಮಟ್ಟದಲ್ಲಿ ನಡೆದ ಅಭ್ಯಾಸ ವರ್ಗವನ್ನು ಇತರೆ ಜಿಲ್ಲೆಗಳಲ್ಲೂ ಕಾರ್ಯಗತಗೊಳಿಸಲು ಸೂಚನೆ ನೀಡಿದ್ದಾರೆ. ರಾಜ್ಯದಲ್ಲೇ ಅತಿಹೆಚ್ಚು ಶಾಸಕರನ್ನು ಹೊಂದಿರುವ ಕರಾವಳಿ ಜಿಲ್ಲೆಗಳು ಸಹಜವಾಗಿಯೇ ಬಿಜೆಪಿ ನಾಯಕರಿಗೆ ಇಷ್ಟವಾಗುತ್ತದೆ. ಹಾಗೂ ಅನೇಕ ನಿರೀಕ್ಷೆಗಳು ಇರುತ್ತದೆ. ಅದನ್ನು ಪೂರೈಸುವುದರಲ್ಲಿ ಸತೀಶ್ ಕುಂಪಲ ಯಶಸ್ವಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಬಹುತೇಕ ಚುನಾವಣೆಯಲ್ಲಿ ಜಿಲ್ಲೆ ಜಯ ಕಂಡಿದ್ದು ಅವರ ಮುಕುಟಕ್ಕೆ ಸಿಕ್ಕ ಮತ್ತೊಂದು ಗರಿ.

Post a Comment

0 Comments