ಮೂಡುಬಿದಿರೆ ಜೈನಮಠಕ್ಕೆ ಭೇಟಿ ನೀಡಿದ ಶೀರೂರು ಸ್ವಾಮೀಜಿ
ಮೂಡುಬಿದಿರೆ : ದೇವರ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಭಗವಂತ ಸ್ಮರಣೆಯಿಂದ ನಮ್ಮ ರಕ್ಷಣೆಯಾಗುತ್ತದೆ. ಧರ್ಮವನ್ನು ನಾವು ರಕ್ಷಿಸಿದಾಗ ಕಾಲ ಕಾಲಕ್ಕೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ನುಡಿದರು.
2026-28ನೇ ಸಾಲಿನ ಉಡುಪಿ ಶೀರೂರು ಮಠದ ಪಯಾ೯ಯದಂಗವಾಗಿ ಬುಧವಾರ ಸಾಯಂಕಾಲ ಮೂಡುಬಿದಿರೆ ಜೈನಮಠಕ್ಕೆ ಭೇಟಿ ನೀಡಿ ಆಶೀವ೯ಚನ ನೀಡಿದರು.
ಪರ್ಯಾಯವು ಕೇವಲ ಮಠದ ಉತ್ಸವವಲ್ಲ. ಇಡೀ ಭಕ್ತ ಸಮೂಹದ ಉತ್ಸವ ಆಗಬೇಕು. ಈ ನಿಟ್ಟಿನಲ್ಲಿ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.
ಮೂಡುಬಿದಿರೆ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಧರ್ಮ ವಿಚಾರ ವಿನಿಮಯ ಮಾಡಿದ ಬಳಿಕ ಶೀರೂರು ಸ್ವಾಮೀಜಿಯನ್ನು ಗೌರವಿಸಿ,
ಮಾತನಾಡಿ ಉಡುಪಿ ಅಷ್ಟಮಠಗಳ ಸ್ವಾಮೀಜಿಗಳೆಲ್ಲರೂ ಮೂಡುಬಿದಿರೆ ಜೈನಮಠದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಈ ಪರಂಪರೆಯನ್ನು ಶೀರೂರು ಸ್ವಾಮೀಜಿಯವರು ಕೂಡ ಮುಂದವರಿಸಿದ್ದಾರೆ. ತಮ್ಮ ಕಿರಿಯ ವಯಸ್ಸಿನಲ್ಲೇ ಸನ್ಯಾಸತ್ವ ಸೀಕರಿಸಿದ ಸ್ವಾಮೀಜಿಯವರಿಂದ ಧರ್ಮ ಜಾಗೃತಿ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ಆದರ್ಶ್ ಕೊಂಡೆಮನೆತನ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ., ಪ್ರಮುಖರಾದ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀಪತಿ ಭಟ್, ಎಂ.ದಯಾನಂದ ಪೈ., ಶ್ವೇತಾ ಜೈನ್, ವೃಂದಾ ರಾಜೇಂದ್ರ, ಶಾಂತರಾಮ್ ಕುಡ್ವ, ರಾಘವೇಂದ್ರ ಭಂಡಾರ್ಕರ್, ಪೂರ್ಣಚಂದ್ರ ಜೈನ್, ಶಂಭವ ಕುಮಾರ್, ನಮಿರಾಜ್ ಜೈನ್, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್ ಸೆಟ್ಟಿ, ಮಹೇಂದ್ರ ಕುಮಾರ್ ಜೈನ್, ರಾಜರಾಮ್ ನಾಗರಕಟ್ಟೆ ಮತ್ತಿತರರಿದ್ದರು.





0 Comments