ವೇಣುಗೋಪಾಲ ಕಾಲೋನಿ ವೆಲ್ಫೇರ್ ಅಸೋಸಿಯೇಷನ್‌ನ ವಾರ್ಷಿಕೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ವೇಣುಗೋಪಾಲ ಕಾಲೋನಿ ವೆಲ್ಫೇರ್ ಅಸೋಸಿಯೇಷನ್‌ನ ವಾರ್ಷಿಕೋತ್ಸವ

ಮೂಡುಬಿದಿರೆ: ಕೊಡಂಗಲ್ಲಿನ ವೇಣುಗೋಪಾಲ ಕಾಲೋನಿ ವೆಲ್ಫೇರ್ ಅಸೋಸಿಯೇಷನ್‌ನ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯಿತ್ತರು.



ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್ ಅಧ್ಯಕ್ಷತೆ ವಹಿಸಿ, "ಕಾಲೋನಿಯು ಮಾದರಿ ಕಾಲೋನಿಯಾಗಿದೆ" ಎಂದರು. 


ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್ ಮುಖ್ಯ ಅತಿಥಿಯಾಗಿದ್ದರು.


ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದ ಶಿಶಿರ ಶೆಟ್ಟಿ, ಅಮೃತೇಶ್, ಚಿನ್ಮಯಿ ಆರ್., ದಿಶಾನ್ ಶೆಟ್ಟಿ, ತ್ರಿಶಾ ಆಚಾರ್ಯ ಅವರುಗಳನ್ನು ಗೌರವಿಸಲಾಯಿತು. ದೀಪಾವಳಿ ಮತ್ತು ನವರಾತ್ರಿಯ ಅಂಗವಾಗಿ ಏರ್ಪಡಿಸಿದ್ದ ಸೀರೆ ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರಾದ ಮಹಿಳೆಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ರಾಜ್ಯಮಟ್ಟದ ರಂಗೋಲಿ ವಿತ್ ದಿಯಾ ಸ್ಪರ್ಧೆಯಲ್ಲಿ ವಿಜೇತರಾದ ಪ್ರೇಕ್ಷಾ ಗೋಪಾಲ್ ಮೊಯಿಲಿ ಮತ್ತು ದಿಶಾ ಹರೀಶ್ ಅವರನ್ನು ಅಭಿನಂದಿಸಲಾಯಿತು.


ಸಂಘದ ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟರಮಣ ಸುವರ್ಣ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ವೆಂಕಟೇಶ್ ಭಟ್ ವಂದಿಸಿದರು. ಬಹುಮಾನಿತರ ಪಟ್ಟಿಯನ್ನು ಜಿ.ಕೆ. ಭಟ್ ವಾಚಿಸಿದರು. ಸನ್ಮಾನಿತರ ಪಟ್ಟಿಯನ್ನು ಜಯರಾಮ್ ಆಳ್ವ ವಾಚಿಸಿದರು. ವೃಂದಾ ಮತ್ತು ಸುಮಿತಾ ಕಾರ್ಯಕ್ರಮ ನಿರೂಪಿಸಿದರು. ಕಾಲೋನಿಯ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

Post a Comment

0 Comments