ಸೈನಿಕನಾಗುವ ಕನಸು ಕಂಡಿದ್ದ ಯುವಕ ಓಂಕಾರ್ ನ ಸಾವಿನಲ್ಲಿ ಸಂಶಯ..?
ಮೂಡುಬಿದಿರೆ: ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಬೇಕೆಂಬ ಅದಮ್ಯ ಕನಸನ್ನು ಹೃದಯದಲ್ಲಿ ಇಟ್ಟುಕೊಂಡಿದ್ದ ಆಳ್ವಾಸ್ ಕಾಲೇಜಿನ ವಿದ್ಯಾಥಿ೯ ಓಂಕಾರ್ ಕಳೆದೊಂದು ವಾರದಿಂದ ಸಾವು–ಬದುಕಿನ ನಡುವೆ ಹೋರಾಡಿ, ಸೋಮವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದು ಆತನ ಸಾವಿನ ಬಗ್ಗೆ ಸಾವ೯ಜನಿಕ ವಲಯದಲ್ಲಿ ಸಂಶಯ ವ್ಯಕ್ತವಾಗುತ್ತಿದೆ...
ವಿದ್ಯಾರ್ಥಿ ಓಂಕಾರ್ ಪೂಜಾರಿ (20),
ಜನವರಿ 4ರಂದು ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು ಆಗ ಮೂಡುಬಿದಿರೆಯ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಪರೀಕ್ಷೆ ನಡೆಸಿದ ವೈದ್ಯರು ಓಂಕಾರ್ ಅವರ ಲಿವರ್ ಸಂಪೂರ್ಣ ವೈಫಲ್ಯಗೊಂಡಿರುವುದನ್ನು ಖಚಿತಪಡಿಸಿದ್ದರು.
ನೆರವು ಹರಿದು ಬಂದರೂ ಉಳಿಯದ ಜೀವ:
ಓಂಕಾರ್ ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಹಣದ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಸಮಾಜಸೇವಕರು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಹಣ ಸಂಗ್ರಹಿಸಿ ಮಾನವೀಯತೆ ಮೆರೆದಿದ್ದರು. ಎರಡು ದಿನಗಳ ಕಾಲ ವೆಂಟಿಲೇಟರ್ ಸಹಾಯದೊಂದಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿತ್ತು ಒಂದು ಹಂತದಲ್ಲಿ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಂತೆ ಭಾಸವಾದರೂ, ಸೋಮವಾರ ಬೆಳಿಗ್ಗೆ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಓಂಕಾರ್ ವಿಧಿವಶರಾದರು.
ಸೇನೆಗೆ ಸೇರುವ ಹಂಬಲ ಓಂಕಾರ್ ಪೂಜಾರಿ ಯವರು ಸದಾ ಭಾರತೀಯ ಸೇನೆಗೆ ಸೇರಬೇಕೆಂಬ ಗುರಿ ಹೊಂದಿದ್ದರು. ದೈಹಿಕ ಕಸರತ್ತು ಹಾಗೂ ಓದಿನಲ್ಲಿ ಮುಂಚೂಣಿಯಲ್ಲಿದ್ದ ಓಂಕಾರ್ ಅವರಿಗೆ ತಕ್ಷಣ ಹೊಟ್ಟೆ ನೋವು ಕಾಣಿಸಲು ಕಾರಣವೇನು.? ಅವರ ತಂದೆ-ತಾಯಿಯ ಮಧ್ಯೆ ಕಲಹವಿತ್ತೇ..? ಮನೆಯ ಆಹಾರದಲ್ಲಿ ಏನಾದರೂ ವ್ಯತ್ಯಾಸವಾಗಿತ್ತೇ..? ಇದರಿಂದಾಗಿ ಆತನ ಸಾವು ಸಂಭವಿಸಿರಬಹುದೇ ಎಂಬ ಸಂಶಯ ಸಾವ೯ಜನಿಕರಲ್ಲಿ ಮೂಡಿದೆ.
ಸಾವ೯ಜನಿಕರ ಈ ಎಲ್ಲಾ ಸಂಶಯಗಳಿಗೆ ತೆರೆ ಬೀಳಬೇಕಾದರೆ ಶವ ಮಹಜರು ವರದಿ (ಪೋಸ್ಟ್ ಮಾಟ೯ಂ ರಿಪೋಟ್೯) ಪೊಲೀಸರ ಕೈ ಸೇರಬೇಕಾಗಿದೆ.



0 Comments