ಉಡುಪಿ ಪಯಾ೯ಯ ಉತ್ಸವ : ಮೂಡುಬಿದಿರೆಯಿಂದ 500 ಅಕ್ಕಿ ಚೀಲಗಳ ಹೊರೆಕಾಣಿಕೆ
ಮೂಡುಬಿದಿರೆ: ಉಡುಪಿ ಪರ್ಯಾಯ ಉತ್ಸವಕ್ಕೆ ಮೂಡುಬಿದಿರೆಯ ಭಕ್ತಾದಿಗಳು ಸಮರ್ಪಿಸಿರುವ ತಲಾ 26 ಕಿಲೋ ತೂಕದ 500 ಅಕ್ಕಿ ಚೀಲಗಳ ಹೊರೆಕಾಣಿಕೆಗೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ಆಡಳಿತದಾರರಾದ ಈಶ್ವರ ಭಟ್ಟರು ದೀಪ ಬೆಳಗಿಸಿ ಚಾಲನೆ ನೀಡಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಎಂಸಿಎಸ್ ಸೊಸೈಟಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ ಎಂ., ಉದ್ಯಮಿಗಳಾದ ಶ್ರೀಪತಿ ಭಟ್, ಆರ್.ಕೆ. ಭಟ್ ಹಾಗೂ ಅಲಂಗಾರು ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು.




0 Comments