ಯುವಕರ ತಂಡದಿಂದ ಪೆಟ್ರೋಲ್ ಬಂಕ್ ನ ಸಿಬಂದಿಗೆ ಹಲ್ಲೆ

ಜಾಹೀರಾತು/Advertisment
ಜಾಹೀರಾತು/Advertisment

 ಯುವಕರ ತಂಡದಿಂದ ಪೆಟ್ರೋಲ್ ಬಂಕ್ ನ ಸಿಬಂದಿಗೆ ಹಲ್ಲೆ

ಮೂಡುಬಿದಿರೆ : ಯುವಕರ ತಂಡವೊಂದು ಪೆಟ್ರೋಲ್ ಬಂಕ್ ನ ಸಿಬಂದಿಗಳಿಗೆ ಹಲ್ಲೆ ನಡೆಸಿದ ಘಟನೆ ಗುರುವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ.

 ಹಲ್ಲೆಗೊಳಗಾಗಿರುವ ಸಿಬಂದಿಗಳಾದ ಸುರೇಶ್, ಮೌನೇಶ್ ಮತ್ತು ಪ್ರವೀಣ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

 ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ತಂಡವು ಸಿಬಂದಿ ಸುರೇಶ್ ಎಂಬಾತನ ಬಳಿ ಮಾತನಾಡಿ ಹಲ್ಲೆ ನಡೆಸಿದ್ದು ಈ ಸಂದಭ೯ ಅಲ್ಲೇ ಇದ್ದವರು ಹಿಂತಿರುಗಿ ಹೊಡೆದಿದ್ದಾರೆ. ಗಾಯಗೊಂಡಿರುವ ಸಿಬಂದಿಗಳು ಮತ್ತು ನಾಲ್ವರು ಯುವಕರು ಪರಿಚಿತರಾಗಿದ್ದು ಹಳೆ ದ್ವೇಷದಿಂದ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. 

 ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Post a Comment

0 Comments