ಸುರೇಂದ್ರ ಆಚಾಯ೯ರ ಚಿಕಿತ್ಸೆಗೆ ಸಾಯಿ ಮಾನಾ೯ಡ್ ನೆರವು
ಮೂಡುಬಿದಿರೆ : ಅಪಘಾತಗೊಂಡು ಚಿಕಿತ್ಸೆಗೆ ಆಥಿ೯ಕ ತೊಂದರೆಯನ್ನು ಅನುಭವಿಸುತ್ತಿರುವ ಮೂಡುಬಿದಿರೆ ತಾಲೂಕಿನ ಮಾಪಾ೯ಡಿ ಗ್ರಾಮದ ಆಶ್ರಯ ಕಾಲೋನಿಯ ಸುರೇಂದ್ರ ಆಚಾರ್ಯ ಅವರಿಗೆ ಪಡುಮಾರ್ನಾಡು ಅಮನಬೆಟ್ಟುವಿನ ಸಾಯಿ ಮಾರ್ನಾಡ್ ಸೇವಾ ಸಂಘವು
ತನ್ನ 82ನೇ ಸೇವಾ ಯೋಜನೆಯ
ನವೆಂಬರ್ ತಿಂಗಳ ಮೊದಲ ಯೋಜನೆಯ ರೂ 10,000ದ ಚೆಕ್ಕನ್ನು ಗುರುವಾರ ಹಸ್ತಾಂತರಿಸಿದೆ.
ಸುರೇಂದ್ರ ಆಚಾರ್ಯ ಅವರಿಗೆ ಕಳೆದ ಒಂದು ತಿಂಗಳ ಹಿಂದೆ ಅಲಂಗಾರ್ ಬಳಿ ಬೈಕ್ ಅಪಘಾತ ವಾಗಿರುತ್ತದೆ. ಅಪಘಾತ ದಲ್ಲಿ ಪಕ್ಕೆಲುಬುಗೆ ಪೆಟ್ಟಾಗಿದ್ದು ಆಪರೇಷನ್ ಮಾಡಬೇಕೆಂದು ತಿಳಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು 170000ರೂಪಾಯಿ ಹಣ ಖರ್ಚಾಗಿರುತ್ತದೆ. ಚಿನ್ನದ ಕೆಲಸ ಮಾಡುತ್ತಿದ್ದು ಇನ್ನು ಕೆಲಸಕ್ಕೆ ಕನಿಷ್ಠ 3ತಿಂಗಳು ಹೋಗಬಾರದೆಂದು ತಿಳಿಸಿರುತ್ತಾರೆ. ಮನೆಗೆ ಆಧಾರ ವಾಗಿರುವ ಇವರಿಗೆ ಅವರ ದೈನಂದಿನ ಹಾಗೂ ಔಷಧಿಯ ಖರ್ಚಿಗೆ ಹಣ ಹೊಂದಿಸಲು ಕಷ್ಟ ವಾಗುತ್ತಿದ್ದು, ಇವರ ಕಷ್ಟ ಕ್ಕೆ ಸ್ಪಂದಿಸಿ ಸೇವಾ ಸಂಘ ದ 82ನೇ ಸೇವಾ ಯೋಜನೆ ಯ 10000ರೂಪಾಯಿಯ ಚೆಕ್ ನ್ನು ನ. 30ರಂದು ಹಸ್ತಾಂತರಿಸಿದೆ.



0 Comments