ಮೂಡುಬಿದಿರೆಯಲ್ಲಿ 'ಸಮಸ್ತ ಆದರ್ಶ ಮಹಾ ಸಮ್ಮೇಳನ' *ಆಕಷ೯ಕ ಕಾಲ್ನಡಿಗೆ ಜಾಥಾ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ 'ಸಮಸ್ತ ಆದರ್ಶ ಮಹಾ ಸಮ್ಮೇಳನ'

   *ಆಕಷ೯ಕ ಕಾಲ್ನಡಿಗೆ ಜಾಥಾ

ಮೂಡುಬಿದಿರೆ : ಸಮಸ್ತದ ನೂರನೇ ವಾರ್ಷಿಕ ಅಂತರರಾಷ್ಟ್ರೀಯ ಮಹಾ ಸಮ್ಮೇಳನದ ಪ್ರಯುಕ್ತ ಹಾಗೂ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಅವರು ಕನ್ಯಾಕುಮಾರಿಯಿಂದ ಮಂಗಳೂರು ತನಕ ಹಮ್ಮಿಕೊಂಡಿರುವ ಶತಾಬ್ದಿ ಸಂದೇಶ ಯಾತ್ರೆಯ ಪ್ರಚಾರಾರ್ಥ ಸಮಸ್ತ ಆದರ್ಶ ಮಹಾ ಸಮ್ಮೇಳನದಂಗವಾಗಿ ಭಾನುವಾರ ಮಧ್ಯಾಹ್ನ ಮೂಡುಬಿದಿರೆ ಟೌನ್ ಮಸೀದಿಯಿಂದ ಲಾಡಿವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ನಡೆಯಿತು. 

 ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಿ‌.ಎ.ಉಸ್ಮಾನ್ ಏರ್ ಇಂಡಿಯಾ ಅವರು ರಫೀಕ್ ಧಾರಾಮಿ ಅವರಿಗೆ ಫ್ಲ್ಯಾಗ್ ನೀಡುವ ಮೂಲಕ ಜಾಥಾಕ್ಕೆ ಚಾಲನೆಯನ್ನು ನೀಡಿದರು. 

ಮೂಡುಬಿದಿರೆ ಟೌನ್ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಶರೀಫ್ ಧಾರಿಮಿ, ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮರೋಡಿ, ಉಪಾಧ್ಯಕ್ಷರಾದ ಅಝೀಝ್ ಮಾಲಿಕ್, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಫಾಯಿಝ್ ಫೈಝಿ, ಎಂ. ಜಿ. ಮಹಮ್ಮದ್, ಅಬ್ದುಲ್ ಸಲಾಂ ಬೂಟ್ ಬಜಾರ್, ಅಬ್ದುಲ್ ರಝಾಕ್, ಮತ್ತಿತರರು ಈ ಸಂದಭ೯ದಲ್ಲಿದ್ದರು. 

ಜಾಥಾದಲ್ಲಿ ಮಕ್ಕಳಿಂದ ದಫ್, ಸ್ಕೌಟ್ಸ್ ಹಾಗೂ ಫ್ಲವರ್ ಶೋ ನಡೆಯಿತು.

Post a Comment

0 Comments