ತಾಲೂಕು ಕೇಂದ್ರವೆಂದು ಪರಿಗಣಿಸಿ ಮೂಡುಬಿದಿರೆಗೆ ತಜ್ಞ ವೈದ್ಯರನ್ನು ನೀಡಬಾರದೇಕೆ...?
ಮೂಡುಬಿದಿರೆ ತಾಲೂಕು ಘೋಷಣೆಯಾಗಿ 8 ವಷ೯ ಕಳೆದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಯಾಗಿ ಮೇಲ್ದಜೆ೯ಗೇರುವ ಭಾಗ್ಯವನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಮತ್ತು ಇದೀಗ ಸರಕಾರದ ಹೊಸ ನೀತಿಯಿಂದಾಗಿ ಡಾಕ್ಟರ್ಸ್ ವಗಾ೯ವಣೆಯಾಗಿ ಹೋಗಲಿರುವುದರಿಂದ ವೈದ್ಯರ ಕೊರತೆ ಮತ್ತಷ್ಟು ಕಾಡಲಿದ್ದು ಸಾವ೯ಜನಿಕರು ತೊಂದರೆಯನ್ನು ಅನುಭವಿಸಲಿದ್ದಾರೆ.
ಹಲವು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಸರಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಹಲವು ಮಂದಿ ವೈದ್ಯರು ಉತ್ತಮ ಸೇವೆಯನ್ನು ನೀಡಿ ಗಮನಸೆಳೆದಿದ್ದಾರೆ.
ಮೂಡುಬಿದಿರೆ ಪರಿಸರದ ಬಡವರು ಸಹಿತ ಹೆಚ್ಚಿನವರಿಗೆ ಆರೋಗ್ಯ ಸಮಸ್ಯೆ ಕಾಡಿದಾಗ ಇಲ್ಲಿಗೆನೇ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಮತ್ತು ಹೆಚ್ಚಿನ ಮಹಿಳೆಯರು ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದು ಈ ಧಮ೯ದ ಆಸ್ಪತ್ರೆಯಲ್ಲಿ.
ಸುತ್ತಮುತ್ತ ಗ್ರಾಮಗಳಲ್ಲಿ ನಡೆದ ಆತ್ಮಹತ್ಯೆ, ಅಪಘಾತ,ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಮರಣೋತ್ತರ ಪರೀಕ್ಷೆ ನಡೆಸಲೂ ಇದೇ ಆಸ್ಪತ್ರೆಗೆ ಕೊಂಡೊಯ್ಯುವುದು ಅನಿವಾಯ೯.
ಕಳೆದ ಕೆಲ ವರ್ಷಗಳಿಂದ ಈ ಆಸ್ಪತ್ರೆಯು ಸಿಬಂದಿಗಳ ಕೊರತೆಯಿಂದ ಅಸೌಖ್ಯದಿಂದ ಇದೆ. ಪೂರ್ಣಕಾಲಿಕ ವೈದ್ಯರಿಲ್ಲದಿರುವುದರಿಂದ ಈಗ ಇರುವ ಡೆಂಟಲ್ ಡಾಕ್ಟರ್ ಅವರು ಯಾರಿಗೂ ತೊಂದರೆಯಾಗದಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಹೆರಿಗೆ ಮಾಡಿಸಲು ಇಲ್ಲಿ ಖಾಯಂ ವೈದ್ಯರಿಲ್ಲದಿರುವುದರಿಂದ ಹೆರಿಗೆಗಾಗಿ ಬರುವ ಗಭಿ೯ಣಿಯರ ಸಂಖ್ಯೆ ಇಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಇದೇ ಕಾರಣವನ್ನು ನೀಡಿ ಇದೀಗ ಜನರಲ್ ಚಿಕಿತ್ಸೆಯನ್ನು ನೀಡುತ್ತಿರುವ ವೈದ್ಯರನ್ನು ವಗಾ೯ವಣೆ ಮಾಡಲಾಗುತ್ತಿದೆ ಇದರ ಪರಿಣಾಮವಾಗಿ ಇನ್ನು ಮುಂದೆ ಸಂಜೆ ವೇಳೆಗೆ ಇರುವ ಮೆಡಿಕಲ್ ಸ್ಟೂಡೆಂಟ್ಸ್ಗಳೇ ತಪಾಸಣೆ ನಡೆಸಿ ಔಷಧಿ ನೀಡಬೇಕಾಗಿದೆ.
ಹಿಂದೊಮ್ಮೆ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದರು. ಈಗಿನ ಸಚಿವರಾದ ದಿನೇಶ್ ಗುಂಡೂರಾವ್ ಅವರಿಗೆ ಕೂಡಾ ಇಲ್ಲಿನ ಸಮಸ್ಯೆಯ ಬಗ್ಗೆ ಗೊತ್ತಿದೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಸುದ್ಧಿಯೂ ಆಗಿತ್ತು ಆದರೆ ಮತ್ತೆ ಅದು ಮರೆತೇ ಹೋಯಿತು.
ಇದೀಗ ಈ ಆಸ್ಪತ್ರೆಯಲ್ಲಿ ಹೆರಿಗೆಗಳು ಕಡಿಮೆ ಸಂಖ್ಯೆಯಲ್ಲಿ ಆಗುತ್ತಿವೆ ಎಂಬ ನೆಪ ಒಡ್ಡಿ ಮೇಲ್ದಜೆ೯ಗೆ ಏರಬೇಕಾಗಿರುವ ಈ ಆಸ್ಪತ್ರೆಯನ್ನು ಯಥಾ ಸ್ಥಿತಿಯಲ್ಲಿಯೇ ನಿಲ್ಲುವಂತೆ ಮಾಡಲಾಗುತ್ತಿದೆ.
ಮಂಗಳೂರು ಅತಿ ದೊಡ್ಡ ತಾಲ್ಲೂಕು. ಅಲ್ಲದೆ ರೆವೆನ್ಯೂ ತಾಲೂಕು ಆಗಿ ವಿಭಜನೆ ಆಗಿದೆ. ಈ ತಾಲೂಕಿನಲ್ಲಿ ಇಡೀ ಜಿಲ್ಲೆಗೆ 4 ತಾಲೂಕು ಆಸ್ಪತ್ರೆಗಳಿವೆ. ಆದರೆ ಮಂಗಳೂರು ತಾಲ್ಲೂಕು ಆಸ್ಪತ್ರೆ ಇಲ್ಲ.
ಮೂಡುಬಿದಿರೆಯಿಂದ ಮಂಗಳೂರು ಜಿಲ್ಲಾ ಆಸ್ಪತ್ರೆಗೆ 43 ಕಿ. ಮೀ ದೂರ ಇದ್ದು ಸುಮಾರು ಒಂದೂವರೆ ಗಂಟೆ
ಜನಿ೯ಯಿದೆ. ಮೂಡುಬಿದಿರೆಯ
ಹತ್ತಿರದ ಹಳ್ಳಿ ಪ್ರದೇಶದ ಜನರಿಗೆ ಮೂಡುಬಿದಿರೆ ಆಸ್ಪತ್ರೆಯೇ ಆಧಾರವಾಗಿದೆ.
ಗ್ರಾಮೀಣ ಪ್ರದೇಶದಲ್ಲಿರುವಂತೆ ನಗರ ಪ್ರದೇಶವಾದ ಮೂಡುಬಿದಿರೆಯಲ್ಲಿ ತಾಲೂಕು ಆಸ್ಪತ್ರೆ ಆಗಬೇಕೆನ್ನುವುದು ಇಲ್ಲಿನ ಹಲವು ಜನರ ಬೇಡಿಕೆಯಾಗಿದೆ. ತಾಲೂಕು ಆಸ್ಪತ್ರೆಯಾಗದ ಹಿನ್ನೆಲೆಯಲ್ಲಿ ಮೂಡುಬಿದಿರೆ ಆಸ್ಪತ್ರೆಯನ್ನು ತಾಲ್ಲೂಕು ಕೇಂದ್ರ ಎಂದು ಪರಿಗಣಿಸಿ ತಜ್ಞ ವೈದ್ಯರನ್ನು ನೇಮಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಮೂಡುಬಿದಿರೆಯ ಜನತೆಯ ಕನಸು ನನಸಾಗಬಹುದು..




0 Comments