ಅಪಾಯಕಾರಿ ಸ್ಥಿತಿಯಲ್ಲಿ ಅಶ್ವತ್ಥಪುರ-ನೀಕೆ೯ರೆ ಸಂಪಕ೯ ಸೇತುವೆ *ಕಾಯ೯ಕಲ್ಪದ ನಿರೀಕ್ಷೆಯಲ್ಲಿ ತೆಂಕಮಿಜಾರಿನ ಜನತೆ

ಜಾಹೀರಾತು/Advertisment
ಜಾಹೀರಾತು/Advertisment

 ಅಪಾಯಕಾರಿ ಸ್ಥಿತಿಯಲ್ಲಿ ಅಶ್ವತ್ಥಪುರ-ನೀಕೆ೯ರೆ ಸಂಪಕ೯ ಸೇತುವೆ

*ಕಾಯ೯ಕಲ್ಪದ ನಿರೀಕ್ಷೆಯಲ್ಲಿ ತೆಂಕಮಿಜಾರಿನ ಜನತೆ

ಮೂಡುಬಿದಿರೆ : ತಾಲೂಕಿನ ತೆಂಕಮಿಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಶ್ವತ್ಥಪುರ- ನೀಕೆ೯ರೆ ಎರಡು ಗ್ರಾಮಗಳಿಗೆ ಸಂಪಕ೯ ಕಲ್ಪಿಸುವ ಸೇತುವೆಯು ಕುಸಿದು ಬೀಳುವ ಅಪಾಯಕಾರಿ ಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದ್ದು ಊರಿನ ಜನರು ಸೇತುವೆಯ ಕಾಯ೯ಕಲ್ಪದ ನಿರೀಕ್ಷೆಯಲ್ಲಿದ್ದಾರೆ. 


 

ಕಳೆದ 31 ವರುಷಗಳ ಹಿಂದೆ 1987ರಲ್ಲಿ ಮಾಜಿ ಸಚಿವ ದಿ. ಅಮರನಾಥ ಶೆಟ್ಟಿ ಅವರು ಶಾಸಕರಾಗಿದ್ದ ಸಂದಭ೯ದಲ್ಲಿ ಶಂಕುಸ್ಥಾಪನೆಗೊಂಡಿರುವ ಈ ಸೇತುವೆಯು 1993ರಲ್ಲಿ ಶಾಸಕರಾಗಿದ್ದ ಸೋಮಪ್ಪ ಸುವಣ೯ ಅವರ ಶಾಸಕತ್ವದಲ್ಲಿ ಉದ್ಘಾಟನೆಗೊಂಡಿತ್ತು. 


 ಅಂದು ತೀರ ಹಳ್ಳಿ ಪ್ರದೇಶವಾಗಿದ್ದ ತೆಂಕಮಿಜಾರು ಗ್ರಾ. ಪಂ. ವ್ಯಾಪ್ತಿ ಇಂದು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಮೂಡುಬಿದಿರೆಯಿಂದ  ಒಳ ಮಾಗ೯ವಾಗಿ ಸಂಪಿಗೆ ಮೂಲಕ ನೀಕೆ೯ರೆ- ಮುಚ್ಚೂರು-ಎಡಪದವು-ಗಂಜಿಮಠದ ಮಂಗಳೂರು ತಲುಪುವ ರಸ್ತೆಯೂ ಇದಾಗಿದ್ದು ಅತೀ ಹೆಚ್ಚು ಸಣ್ಣ ಮತ್ತು ಘನ ವಾಹನಗಳು ಈ ಸೇತುವೆಯ ಮೂಲಕವೇ ಹಾದು ಹೋಗುತ್ತಿರುವುದರಿಂದ  ವಾಹನಗಳ ಭಾರವನ್ನು ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು ಸೇತುವೆ ಯಾವಾಗ ಕುಸಿದು ಬೀಳುವುದೋ ಎಂಬ ಭೀತಿಯಿಂದಲೇ ಜನರು ಸಂಚಾರ ಮಾಡುತ್ತಿದ್ದಾರೆ. 

  

ಶಾಸಕ ಉಮಾನಾಥ ಕೋಟ್ಯಾನ್ ಅವರು ಗ್ರಾ. ಪಂ. ವ್ಯಾಪ್ತಿಗಳಲ್ಲಿರುವ ಹೆಚ್ಚಿನ ಸಂಪಕ೯ ಸೇತುವೆಗಳ ಮರು ನಿಮಾ೯ಣದ ಬಗ್ಗೆ ಆಸಕ್ತಿಯನ್ನು ವಹಿಸಿದ್ದಾರೆ.ಕೆಲವು ಕಡೆಗಳಲ್ಲಿ ಈಗಾಗಲೇ ಸೇತುವೆಗಳು ನಿಮಾ೯ಣವಾಗಿ ಉದ್ಘಾಟನೆಯೂ ಆಗಿದೆ.  ಈ ಸೇತುವೆಯ ಬಗ್ಗೆಯೂ ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದು ಹೊಸ ಸೇತುವೆಯ ಬೇಡಿಕೆಯನ್ನಿಟ್ಟಿದ್ದರು. ಆದರೆ ಅತೀ ಅಗತ್ಯವಾಗಿ ನಿಮಾ೯ಣಗೊಳ್ಳಬೇಕಾಗಿದ್ದ ಈ ಸೇತುವೆ ಮಾತ್ರ ಇನ್ನೂ ಕಾಮಗಾರಿ ಆರಂಭದ ಭಾಗ್ಯವನ್ನು ಕಂಡಿಲ್ಲವೆನ್ನುವುದೇ ದುರಂತ.

 

   ಶಾಲಾ, ಕಾಲೇಜಿಗೆ ಹೋಗುವ ಮಕ್ಕಳು, ಉದ್ಯೋಗಕ್ಕಾಗಿ ಮೂಡುಬಿದಿರೆಗೆ ಬರುವವರು, ಕೂಲಿ ಕಾಮಿ೯ಕರು ಈ ಸೇತುವೆಯ ಮೂಲಕವೇ ಹಾದು ಹೋಗಬೇಕು. ಮುಂದಿನ ಮಳೆಗಾಳದೊಳಗಾಗಿ ನೂತನ ಸೇತುವೆ ನಿಮಾ೯ಣವಾಗದಿದ್ದರೆ ಈ ಸೇತುವೆಯಿಂದ  ಅನಾಹುತ ಸಂಭವಿಸುವುದಂತೂ ಗ್ಯಾರಂಟಿ ಎಂದು ಗ್ರಾಮಸ್ಥರ ಅಭಿಪ್ರಾಯ. 


ವರದಿ : ಪ್ರೇಮಶ್ರೀ ಕಲ್ಲಬೆಟ್ಟು, ಮೂಡುಬಿದಿರೆ

------------------------

ಸಂಪಕ೯ ಸೇತುವೆ ನಿಮಾ೯ಣಕ್ಕೆ ಅನುದಾನದ ಕೊರತೆ...? : ಅಶ್ವತ್ಥಪುರ-ನೀಕೆ೯ರೆ ಸಂಪಕ೯ದ ನೂತನ ಸೇತುವೆ ನಿಮಾ೯ಣಕ್ಕೆ  ರೂ 9.9 ಕೋ. ವೆಚ್ಚದ ಟೆಂಡರ್ ಆಗಿದ್ದು 48 ಮೀಟರ್ ಉದ್ದ, 10.5 ಮೀ. ಬ್ರಿಡ್ಜ್ ಅಗಲ, 7.5 ಮೀಟರ್ ರಸ್ತೆ, 1.5 ಮೀ ಫುಟ್ ಪಾತ್, ಪೈಪ್ ಲೈನ್  ಪಾಸ್ ಆಗಲು 1.5 ಮೀ ಎಂದು ಎಸ್ಟಿಮೇಟ್ ಮಾಡಲಾಗಿದ್ದು ಸರಕಾರಕ್ಕೆ ಕಳುಹಿಸಲಾಗಿದೆ ಆದರೆ ಅನುದಾನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಸೇತುವೆ ಕಾಮಗಾರಿ ಆರಂಭವಾಗಿಲ್ಲವೆಂದು ತಿಳಿದು ಬಂದಿದೆ.

---------------------------

Post a Comment

0 Comments