ತುಳು ನಾಡು-ನುಡಿಗೆ ಜೈನರ ಕೊಡುಗೆ ಉಪನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 ತುಳು ನಾಡು-ನುಡಿಗೆ ಜೈನರ ಕೊಡುಗೆ ಉಪನ್ಯಾಸ

ಮೂಡುಬಿದಿರೆ: ತುಳುನಾಡಿನ ಭಾಷೆ ಮತ್ತು ಸಂಸ್ಕೃತಿಗೆ ಜೈನ ವಿದ್ವಾಂಸರು, ರಾಜಮನೆತನಗಳು ಹಾಗೂ ಜಿನಾಲಯಗಳ ಕೊಡುಗೆ ಚಾರಿತ್ರಿಕವಾದುದು. ಶಾಂತಿ, ಸಾಮರಸ್ಯ ಮತ್ತು ಸಾಮಾಜಿಕ ಸಮನ್ವಯತೆಯನ್ನು ಕಾಪಾಡುವಲ್ಲಿ ಜೈನ ಧರ್ಮದ ಪಾತ್ರ ಹಿರಿದು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದರು.


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮೂಡುಬಿದಿರೆ ಶ್ರೀ ಜೈನ ಮಠ ಹಾಗೂ ನಾದ ನೂಪುರ ಯಕ್ಷೋತ್ಥಾನ ಟ್ರಸ್ಟ್ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ತುಳುನಾಡು ನುಡಿಗೆ ಜೈನರ ಕೊಡುಗೆ ಎಂಬ ಎಂ.ಕೆ. ರವೀಂದ್ರನಾಥ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


ಮೂಡುಬಿದಿರೆ ಜೈನ ಮಠದ ಡಾ.ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾರ್ಯವರ್ಯ ಮಹಾಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಅನೇಕ ಜೈನ ಕವಿಗಳು ತುಳು ಭಾಷೆಗೆ ವಿಶಿಷ್ಟ ಸಾಹಿತ್ಯಿಕ ಕೊಡುಗೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು.


ಉಜಿರೆ ಎಸ್.ಡಿ.ಎಂ. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸನ್ಮತಿ ಕುಮಾರ್ ವಿಷಯ ಮಂಡನೆ ಮಾಡಿ, ಮಹಾತ್ಮ ಗಾಂಧೀಜಿಯವರು ಅನುಷ್ಠಾನಗೊಳಿಸಿದ ಶಾಂತಿ ಮತ್ತು ಉಪವಾಸದ ತತ್ವಗಳು ಮೂಲತಃ ಜೈನ ತೀರ್ಥಂಕರರು ಬೋಧಿಸಿದ ವಿಚಾರಗಳಾಗಿವೆ. ತುಳುನಾಡಿನ ಸಾಂಸ್ಕೃತಿಕ ಸಮೃದ್ಧಿಯಲ್ಲಿ ಜೈನರ ಪಾಲು ದೊಡ್ಡದಿದೆ ಎಂದರು. 


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸುತೇಜ ಅವರು ವಿದ್ಯಾರ್ಥಿಗಳ ಪರವಾಗಿ ವಿಷಯದ ಬಗ್ಗೆ ಮಾತನಾಡಿದರು.


ನೆಲ್ಲಿಕಾರು ಬಸದಿ ಮೊಕ್ತೇಸರ ವಿಮಲ್ ಕುಮಾರ್ ಬೆಟ್ಕೇರಿ, ವೀಣಾ ರಘುಚಂದ್ರ ಶೆಟ್ಟಿ, ವಂಡಾರು ಗೋವಿಂದ ಉಪಸ್ಥಿತರಿದ್ದರು. 


ಶುಭಾಶಯ ಜೈನ್ ಸ್ವಾಗತಿಸಿದರು. ಅಕಾಶವಾಣಿ ಉದ್ಘೋಷಕ ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಂಜಯಂತ ಕುಮಾರ್ ಶೆಟ್ಟಿ ವಂದಿಸಿದರು.

Post a Comment

0 Comments