ಶಾಲೆಯಲ್ಲಿ ಶಿಕ್ಷಕರೇ ವಿದ್ಯಾಥಿ೯ಗಳಿಗೆ ತಂದೆ-ತಾಯಿ : ಅಭಯಚಂದ್ರ ಜೈನ್
ಮೂಡುಬಿದಿರೆ : ಆಸುಪಾಸಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ಧೇಶದಿಂದ ಆರಂಭವಾಗಿರುವ ಈ ಶಾಲೆಯಲ್ಲಿ ಈಗ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿರುವುದು ಸಂತಸ. ದೂರದೂರುಗಳಿಂದ ಬಂದು ಇಲ್ಲಿಗೆ ಬಂದು ಶಿಕ್ಷಣ ಪಡೆಯುತ್ತಿರುವ ನಿಮಗೆ ಇಲ್ಲಿನ ಶಿಕ್ಷಕ ಶಿಕ್ಷಕಿಯವರು ಮತ್ತು ಆಡಳಿತ ವಗ೯ದವರೇ ತಂದೆ ತಾಯಿಯಂದಿರು ಎಂಬುದನ್ನು ಅರಿತುಕೊಂಡು ಪ್ರೀತಿಯಿಂದ ವಿದ್ಯೆಯನ್ನು ಪಡೆಯಿರಿ ಎಂದು ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ಬುಧವಾರ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವಾಷಿ೯ಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್. ಐ. 3181ರ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಉತ್ತಮ ಸಂಸ್ಕಾರದೊಂದಿಗೆ ವಿದ್ಯೆಯನ್ನು ಗಳಿಸಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಯೋನಿವೃತ್ತಿ ಹೊಂದಿರುವ ಶಂಕರ ಭಟ್ ಹಾಗೂ ಮೇಬಲ್ ಸಿಂತಿಯಾ ಮೆಂಡೋನ್ಸಾ ಇವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್ ವಿರೂಪಾಕ್ಷಪ್ಪ ಹಳೆವಿದ್ಯಾರ್ಥಿಗಳಾದ ಪ್ರಕಾಶ್ ನಾಯ್ಕ, ಪೃಥ್ವಿರಾಜ್, ಸುಶಾಂತ್ ಕರ್ಕೇರ ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಅಧ್ಯಾಪಕ ಕಿರಣಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ತೆರೆಸಾ ಕರ್ಡೋಜಾ ವರದಿ ವಾಚಿಸಿದರು. ಶಿಕ್ಷಕರಾದ ಅಣ್ಣು ಹಾಗೂ ಪ್ರಶಾಂತ ಬಹುಮಾನಿತರ ವಿವರ ನೀಡಿದರು. ವೆಂಕಟ್ರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾಯ೯ಕ್ರಮದ ನಂತರ ವಿದ್ಯಾಥಿ೯ಗಳಿಂದ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆದವು.
-----------------------------
ನಮ್ಮ ಜೀವನದಲ್ಲಿ ನಮಗೆ ಸಿಗುವ ಬೇರೆ ರೀತಿಯ ಜನರ ಜತೆ ಕ್ರಷ್ ಆಗುವುದು ಸಹಜ ಆದರೆ ನಮಗೆ ತುತ್ತಿಟ್ಟು ಮುತ್ತಿಟ್ಟು ತೊಟ್ಟಿಲು ತೂಗಿ ಬದುಕಿನಲ್ಲಿ ಎಂದೂ ಬದಲಾಗದೆ ಇರುವ ತಾಯಿಯ ಮೇಲೆ, ತನ್ನ ಅಧ೯ ಜೀವನವನ್ನು ಮಕ್ಕಳಿಗಾಗಿ ಮೀಸಲಿಟ್ಟು ದುಡಿಯುವ ತಂದೆಯ ಮೇಲೆ, ಉತ್ತಮ ಶಿಕ್ಷಣವನ್ನು ನೀಡುವ ಶಿಕ್ಷಕರ ಮೇಲೆ, ಅಜ್ಜ-ಅಜ್ಜಿಯ ಮೇಲೆ ಹಾಗೂ ನಮ್ಮ ದೇಶವನ್ನು ಕಾಯುವ ವೀರ ಯೋಧರ ಮೇಲೆ ನಮಗೆ ಜೀವನ ಕ್ರಷ್ ಆಗಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿತ್ ಶೆಟ್ಟಿ ವಿದ್ಯಾಥಿ೯ಗಳಿಗೆ ಕಿವಿ ಮಾತು ಹೇಳಿದರು.
-----------------------




0 Comments