ಡಿ. 14ರಂದು ಮೂಡುಬಿದಿರೆಯಲ್ಲಿ "ತತ್ವಂ ಸಲೂನು ಮತ್ತು ಸ್ಪಾ" ಉದ್ಘಾಟನೆ
ಮೂಡುಬಿದಿರೆ: ಸೌಂದರ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ನಿಟ್ಟಿನಲ್ಲಿ, 'ತತ್ವಂ (TATTVAM) ಸಲೂನ್ ಮತ್ತು ಸ್ಪಾ' ಡಿಸೆಂಬರ್ 14 ರಂದು ಮೂಡುಬಿದಿರೆಯಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ. ಕ್ರಿಸ್ಟಲ್ ಕೋರ್ಟ್ ಬಿಲ್ಡಿಂಗ್‌ನ ಡೊಮಿನೋಸ್ ಪಿಜ್ಜಾ ಮೇಲೆ, ಸ್ವರಾಜ್ ಮೈದಾನದ ಎದುರು ಈ ನೂತನ ಸಂಸ್ಥೆಯು ಗ್ರಾಹಕರಿಗೆ ಲಭ್ಯವಾಗಲಿದೆ.
ಡಿಸೆಂಬರ್ 14 ರಂದು ಸಂಜೆ 4:30 ಕ್ಕೆ ಮಹಾ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಸಮಾರಂಭಕ್ಕೆ ಗಣ್ಯರು ಸಾಕ್ಷಿಯಾಗಲಿದ್ದಾರೆ. ಮೂಡುಬಿದಿರೆಯ ಶಾಸಕರಾದ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿರುವರು. ಸಿಎ ಎಸ್. ಎಸ್. ನಾಯಕ್, ವೈದ್ಯಕೀಯ ಕ್ಷೇತ್ರದ ಡಾ. ಪ್ರಿಯದರ್ಶಿನಿ ಮತ್ತು ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ., ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿಮಿಟೆಡ್‌ನ ಅಧ್ಯಕ್ಷರಾದ ಡಾ. ಜಿ. ರಾಮಕೃಷ್ಣ ಆಚಾರ್, ವಕೀಲರಾದ ಶರತ್ ಶೆಟ್ಟಿ ಡಿ., ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್ ಅತಿಥಿಗಳಾಗಿರುವರು
ಸಂಸ್ಥೆಯು ಉದ್ಘಾಟನಾ ಸಮಾರಂಭಕ್ಕೆ ಸಂಸ್ಥೆಯ ಪಾಲುದಾರರಾದ ಕೆವಿನ್ ಹಾಗೂ ರೆನಿಟಾ ಎಲ್ಲರಿಗೂ ಸ್ವಾಗತವನ್ನು ಕೋರಿದ್ದಾರೆ.
ವಿಳಾಸ: ಕ್ರಿಸ್ಟಲ್ ಕೋರ್ಟ್ ಬಿಲ್ಡಿಂಗ್, ಡೊಮಿನೋಸ್ ಪಿಜ್ಜಾ ಮಳಿಗೆ ಮೇಲೆ, ಸ್ವರಾಜ್ ಮೈದಾನದ ಎದುರು, ಮೂಡುಬಿದಿರೆ - 574227.
ಸಂಪರ್ಕ ಸಂಖ್ಯೆ: +91 91485 44507.



0 Comments