ಯುವಕನಿಗೆ ಮಾರಕಾಯುಧದಿಂದ ಹಲ್ಲೆ : ಮಿಥುನ್ ರೈ ಭೇಟಿ
ಮೂಡುಬಿದಿರೆ : ಎಡಪದವಿನಲ್ಲಿ ಸೋಮವಾರ ತಲವಾರು ದಾಳಿಗೆ ಒಳಗಾಗಿ ಮೂಡುಬಿದಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರುವೈಲ್ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆವರು ಮಂಗಳವಾರ ಆಸ್ಪತ್ರೆಯಲ್ಲಿ ಭೇಟಿಯಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ವಿನಂತಿಸಿದರು.
ಈ ಸಂದಭ೯ದಲ್ಲಿ ಮುಖಂಡರಾದ ಪ್ರವೀಣ್ ಕುಮಾರ್, ಅನೀಶ್ ಡಿ'ಸೋಜಾ, ರಾಜೇಶ್ ಕಡಲಕೆರೆ, ಸಂದೀಪ್ ಆಲಂಗಾರು, ಪೂಣ೯ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.



0 Comments