*ಕುರುಕ್ಷೇತ್ರ -2025*" _ಅಂತರ್ ಕಾಲೇಜು_ _ಫೆಸ್ಟ್. ಜೈನ ಪದವಿಪೂರ್ವ_ _ಕಾಲೇಜಿಗೆ_ _ಪ್ರಥಮ_ _ಸಮಗ್ರ ಪ್ರಶಸ್ತಿ_.
ಮೂಡುಬಿದಿರೆ ಶ್ರೀ ಧವಲಾ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕುರುಕ್ಷೇತ್ರ- 2025 ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡ ಜೈನ ಪದವಿಪೂರ್ವ ಕಾಲೇಜು ಪ್ರಥಮ ಸಮಗ್ರ ಪ್ರಶಸ್ತಿ ವಿಜೇತ ತಂಡವಾಗಿ ಹೊರಹೊಮ್ಮಿತು. ಕಾಲೇಜಿನ ಆಡಳಿತ ಮಂಡಳಿ ಶ್ರೀ ಮೂಡುಬಿದಿರೆ ಡಿ.ಜೆ.ವಿ ಸಂಘದ ಗೌರವಾನ್ವಿತ ಸಂಚಾಲಕರಾದ ಶ್ರೀ ಕೆ. ಹೇಮರಾಜ್ ಇವರು ಸಾಧಕರಿಗೆ ಪ್ರಶಸ್ತಿ ಫಲಕ ನೀಡಿ ಶುಭ ಹಾರೈಸಿದರು.



0 Comments