ಕಾರ್ಕಳ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಪೂರ್ವಭಾವಿಸಭೆ
ಕಾರ್ಕಳ ಶ್ರೀ ಬಾಹುಬಲಿ ಸ್ವಾಮಿಯ 2027 ರ ಮಹಾಮಸ್ತಕಾಭಿಷೇಕ ಪೂರ್ವಭಾವಿಯಾಗಿ ಜೀರ್ಣೋದ್ಧಾರ ಸಂಘದ ಕಾರ್ಯಾಧ್ಯಕ್ಷರಾದ ಡಾ ಎಂ ಏನ್ ರಾಜೇಂದ್ರ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಎರಡನೆಯ ಪೂರ್ವಭಾವಿ ಸಭೆಯು ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನಡೆಯುವ ಸಂದರ್ಭದಲ್ಲಿ ಕೇವಲ ಮಹಾಮಸ್ತಕಾಭಿಷೇಕ ಮಾತ್ರ ನಡೆಯದೇ ಸಾರ್ವಜನಿಕರಿಗೂ ಪ್ರಯೋಜನ ಜೊತೆಗೆ ನೆನಪಿಡುವಂತಹ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಶ್ರೀ ಬಾಹುಬಲಿ ಸ್ವಾಮಿ ಮೂರ್ತಿಯನ್ನು ಪುರಾತತ್ವ ಇಲಾಖೆಯ ವತಿಯಿಂದ ಸ್ವಚ್ಛತೆ ಮಾಡುವ ಮತ್ತು ಮಹಾಮಸ್ತಕಾಭಿಷೇಕ ಪ್ರಯುಕ್ತ ಬೆಟ್ಟದಲ್ಲಿ ಆಗಬೇಕಿರುವ ಅಭಿವೃದ್ಧಿಯ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಗಳಾದ ಸೂರಜ್ ಮತ್ತು ಆನಂದ ನಾಯ್ಕ್ ರವರ ಜೊತೆ ಚರ್ಚಿಸಲಾಯಿತು . ಈ ಸಂದರ್ಭದಲ್ಲಿ ಸಮಿತಿಯ ಕೋಶಾಧಿಕಾರಿಯವರಾದ ಡಾ ಜೀವಂಧರ ಬಲ್ಲಾಳ್, ಹಿರಿಯರಾದ ಶ್ರೀ ಅನಂತರಾಜ ಪೂವಣಿ ಮತ್ತು ಸಮಾಜದ ಹಿರಿಯರು ಉಪಸ್ಥಿತರಿದ್ದರು.



0 Comments