ಮೂಡುಬಿದಿರೆಗೆ 10 ಮಂದಿ ಮುನಿಗಳ ಪುರ ಪ್ರವೇಶ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಗೆ 10 ಮಂದಿ ಮುನಿಗಳ ಪುರ ಪ್ರವೇಶ 

ಮೂಡುಬಿದಿರೆ: ಜೈನಕಾಶಿ  ಮೂಡುಬಿದಿರೆಯಲ್ಲಿ 10 ಮಂದಿ ಮುನಿಗಳ ಪುರ ಪ್ರವೇಶ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.


ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಶ್ರಾವಕರು ಮುನಿಗಳನ್ನು ಜೈನ ಮಠಕ್ಕೆ ಬರಮಾಡಿಕೊಂಡರು. ಶಾಂತಮೂರ್ತಿ ಆಚಾರ್ಯ ಶ್ರೀ 108 ವಾತ್ಸಲ್ಯ ರತ್ನಾಕರ, ನಿರ್ಯಾಪಕ ಮುನಿ ಶ್ರೀ 108 ಸಿದ್ಧಾಂಥ ಸಾಗರ್ ಜೀ ಮಹಾರಾಜ್, ಮುನಿ ಶ್ರೀ 108 ಪ್ರಶಾಂತ್ ಸಾಗರ್ ಜೀ ಮಹಾರಾಜ್, ಮುನಿ ಶ್ರೀ 108 ಅವಿಛಲ್ ಸಾಗರ್ ಜೀ ಮಹಾರಾಜ್, ಮುನಿ ಶ್ರೀ 108 ಶಾಶ್ವತ್ ಸಾಗರ್ ಜೀ ಮಹಾರಾಜ್ ,‌ಮುನಿ ಶ್ರೀ 108 ಅಧ್ಯಾತ್ಮ ಸಾಗರ್ ಜೀ ಮಹಾರಾಜ್, ಮುನಿ ಶ್ರೀ 108 ಆಗಮ್ ಸಾಗರ್ ಜೀ ಮಹಾರಾಜ್ , ಮುನಿ ಶ್ರೀ 108 ವಿರಾಟ್ ಸಾಗರ್ ಜೀ ಮಹಾರಾಜ್, ಮುನಿ ಶ್ರೀ 108 ನೇಮಿ ಸಾಗರ್ ಜೀ ಮಹಾರಾಜ್, ಮುನಿ ಶ್ರೀ 108 ಅನೇಕಾಂತ ಸಾಗರ್ ಜೀ ಮಹಾರಾಜ್ ಪುರಪ್ರವೇಶಗೈದರು.

ಸಾವಿರ ಕಂಬ ಬಸದಿಯಲ್ಲಿ ಮುನಿವರ್ಯರಿಗೆ ಜಲಾಭಿಷೇಕ, ಆಚಾರ್ಯ ಸಂಘದ ಪಾದ ಪೂಜೆ ಮತ್ತು ಮಹಾ ಮಂಗಳಾರತಿ ಜರುಗಿತು. ಜಗತ್ಪಾಲ ಇಂದ್ರ,  ಚೆನ್ನಾಬೈರಾ ದೇವಿ ಮಂಟಪದಲ್ಲಿ ಈ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.


ಆಚಾರ್ಯ 108 ವಿದ್ಯಾಸಾಗರ್ ಮುನಿ ಮಹಾರಾಜ್ ಅವರು ಮಾತನಾಡಿ, ಮೂಡುಬಿದಿರೆ ಜೈನ ಕೇಂದ್ರದಲ್ಲಿರುವ ಬಸದಿ, ಜಿನ ಬಿಂಬ ಶಾಸ್ತ್ರಗಳ ಕಾರಣದಿಂದ ಜಗತ್ತಿನ ಶ್ರೇಷ್ಠ ತೀರ್ಥ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಪಡೆದಿದೆ. ಭಟ್ಟಾರಕರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನಾವೆಲ್ಲರೂ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು. 


ಬಸದಿಗಳ ಮೊಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಆದರ್ಶ್, ಪ್ರಮುಖರಾದ ಶಂಭವ ಕುಮಾರ್, ಬಾಹುಬಲಿ ಪ್ರಸಾದ್, ಶೈಲೇಂದ್ರ, ಅನಂತ್ ವೀರ ಶ್ವೇತಾ ಜೈನ್, ಮಂಜುಳಾ ಅಭಯಚಂದ್ರ, ವೃಂದಾ ರಾಜೇಂದ್ರ, ಸುದೇಶ್ ಕುಮಾರ್ ಎ., ಸಂಜಯಂತ ಕುಮಾರ್  


ಸೋಮವಾರ ಬೆಳಗ್ಗೆ ಮುನಿಗಳು 18 ಬಸದಿ ದರ್ಶನ, ಮಧ್ಯಾಹ್ನ ಸಾವಿರ ಕಂಬ ಬಸದಿಯಲ್ಲಿ ಪ್ರವಚನ ಕಾರ್ಯಕ್ರಮ ನೀಡಲಿದ್ದಾರೆ.

Post a Comment

0 Comments