ಸುಳ್ಳು ಸಂದೇಶ ಹಬ್ಬಿಸದಂತೆ ಪೊಲೀಸ್ ಕಮೀಷನರ್ ಎಚ್ಚರಿಕೆ

ಜಾಹೀರಾತು/Advertisment
ಜಾಹೀರಾತು/Advertisment

 ಸುಳ್ಳು ಸಂದೇಶ ಹಬ್ಬಿಸದಂತೆ ಪೊಲೀಸ್ ಕಮೀಷನರ್ ಎಚ್ಚರಿಕೆ 



    ಮೂಡುಬಿದಿರೆ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳನ್ನು ಹಬ್ಬಿಸದಂತೆ ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ. 


ಇತ್ತೀಚೆಗೆ ಮೂಡುಬಿದಿರೆಯ ಸಂಸ್ಥೆಯೊಂದರ ಕಾರ್ಯಕ್ರಮದ ವೇಳೆ ಪೊಲೀಸರು ಅಡುಗೆಯನ್ನು ಪರಿಶೀಲನೆ ನಡೆಸಿದ್ದಾರೆ ಎಂಬ ಆರೋಪದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶಗಳನ್ನು ಹಬ್ಬಿಸಲಾಗಿದೆ. ಕಳೆದ ಹತ್ತು ದಿನಗಳಿಂದ ಇಂತಹ ಬೆಳವಣಿಗೆಗಳು ನಡೆಯುತ್ತಿದ್ದು, ಹಳೇ ಘಟನೆಗಳು ಅಥವಾ ನಿತ್ಯ ನಡೆಯುವ ಸಂಗತಿಗಳನ್ನು ದೊಡ್ಡದಾಗಿ ಬಿಂಬಿಸುವ, ಸುಳ್ಳು ಸುದ್ದಿಗಳನ್ನು ಸೃಷ್ಟಿಸಿ ಹಬ್ಬಿಸುವ ಕೆಲಸಗಳನ್ನು ಕೆಲವು ಗುಂಪುಗಳು ಮಾಡುತ್ತಿವೆ ಎಂದರು. 

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ:

 "ಅಂತಹವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅವರದ್ದೇ ಗುಂಪಿನಲ್ಲಿರುವ ಜಾತ್ಯತೀತ ಹಿಂದೂಗಳು ಅಥವಾ ಮುಸ್ಲಿಮರು ನಮಗೆ ಮಾಹಿತಿ ನೀಡುತ್ತಾರೆ ಎನ್ನುವ ವಿಚಾರ ಅವರಿಗೆ ತಿಳಿದಿಲ್ಲ. ಹಾಗಾಗಿ, ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದ್ದಾರೆ.

 ಕೋಮುದ್ವೇಷ ಹರಡುವ ಗುಂಪು: 

ಸ್ಥಳೀಯವಾಗಿ ಮತ್ತು ಹೊರ ದೇಶಗಳಲ್ಲಿ ಕುಳಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ, ಮುಸ್ಲಿಮರಲ್ಲಿ ಅಭದ್ರತೆ ಮೂಡುವಂತಹ ವದಂತಿಗಳನ್ನು ಹರಡುವ ಕೆಲಸ ಕೆಲವು ಮಂದಿಯ ತಂಡದಿಂದ ನಡೆಯುತ್ತಿದೆ. ಅವರ ಗುರಿಯೇ ಕೋಮುದ್ವೇಷವನ್ನು ಹರಡುವುದಾಗಿದೆ. ಈ ವಿಚಾರವನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

 

ಸಂಸ್ಥೆಯಿಂದ ಸ್ಪಷ್ಟೀಕರಣ: ಈ ಬೆಳವಣಿಗೆಗಳ ಬಗ್ಗೆ ಆರೋಪಕ್ಕೆ ಸಂಬಂಧಿಸಿದ ಸಂಸ್ಥೆಯವರು ಸ್ಪಷ್ಟೀಕರಣ ನೀಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Post a Comment

0 Comments