ನಿಡ್ಡೋಡಿಯಲ್ಲಿ ವಾಲಿಬಾಲ್ ಪಂದ್ಯಾಟ : ಕುಂದಾಪುರದ ಡೇಂಜರ್ ಬಾಯ್ಸ್ ಪ್ರಥಮ

ಜಾಹೀರಾತು/Advertisment
ಜಾಹೀರಾತು/Advertisment

 ನಿಡ್ಡೋಡಿಯಲ್ಲಿ ವಾಲಿಬಾಲ್ ಪಂದ್ಯಾಟ :  ಕುಂದಾಪುರದ ಡೇಂಜರ್ ಬಾಯ್ಸ್ ಪ್ರಥಮ

ಮೂಡುಬಿದಿರೆ : ನಿಡ್ಡೋಡಿಯ ಕಲ್ಲಕುಮೇರುವಿನ ಲವ್ಲಿ ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ಹಮ್ಮಿಕೊಂಡಿದ್ದ ಹದಿನೇಳು ವರುಷದ ಬಾಲಕರ ವಾಲಿಬಾಲ್ ಪಂದ್ಯಾಕೂಟದಲ್ಲಿ ಕುಂದಾಪುರದ ಡೇಂಜರ್ ಬಾಯ್ಸ್ ತಂಡವು ಪ್ರಥಮ ಹಾಗೂ ಯುನೈಟೆಡ್ ಫ್ರೆಂಡ್ಸ್ ತಾಳಿಪಾಡಿ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.


     ಕುಂದಾಪುರ ತಂಡದ ಆದಿತ್ಯ ಬೆಸ್ಟ್ ಎಟಾಕರ್,ಅದೇ ತಂಡದ ನಿತಿನ್ ಬೆಸ್ಟ್ ಸೆಟ್ಟರ್ ಹಾಗೂ ತಾಳಿಪಡಿ ತಂಡದ ಅಮಿತ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡರು.


  ಸಮಾರೋಪ ಸಮಾರಂಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಬಿ.ಆರ್.ಪ್ರಸಾದ್,ನಿವೃತ್ತ ಸೈನಿಕರಾದ ಉದಯಚಂದ್ರ ಭಟ್,ನಂದೀಶ್ ಕೋಟ್ಯಾನ್, ಸನತ್ ಶೆಟ್ಟಿ ಹಾಗೂ ತೀರ್ಪುಗಾರರಾದ ಸಂದೀಪ್ ಮತ್ತಿತರರು ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.ಸುಂದರ ಪೂಜಾರಿ ನಿಡ್ಡೋಡಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments