ಪಣಪಿಲದಲ್ಲಿ ರೂ 1.30 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಕೋಟ್ಯಾನ್ ಶಿಲಾನ್ಯಾಸ,
ಮೂಡುಬಿದಿರೆ : ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಗ್ರಾಮದಲ್ಲಿ ರೂ 1.10 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ 20ಲಕ್ಷದಲ್ಲಿ ನಿಮಾ೯ಣಗೊಂಡಿರುವ ಹಿಂದೂ ರುದ್ರಭೂಮಿಯ ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿದರು.
ಕಳೆದ ವಷ೯ದ ಮಳೆಗೆ ಕೊಚ್ಚಿ ಹೋಗಿರುವ ಪಣಪಿಲ ಗ್ರಾಮದ ಬಿಮೆ೯ರೆ ಬೈಲು (ಬಿರ್ಮೆರಗುಂಡಿ) ಬಳಿ ರೂ 60ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸೇತುವೆ ಮತ್ತು ಪಣಪಿಲ ಗ್ರಾಮದ ಪಿಲಿಕುಡೇಲು ಬಳಿ ರೂ.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಲ್ಲೇರಿ ಅಬಿ೯ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಪಣಪಿಲ ಗ್ರಾಮದಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಿಂದೂ ರುದ್ರಭೂಮಿ ಕಾಮಗಾರಿಯನ್ನು ಉದ್ಘಾಟಿಸಲಾಯಿತು.
ದರೆಗುಡ್ಡೆ ಗ್ರಾ. ಪಂ. ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಉಪಾಧ್ಯಕ್ಷೆ ನಳಿನಿ, ಸದಸ್ಯರಾದ ಮುನಿರಾಜ್ ಹೆಗ್ಡೆ, ತುಳಸಿ ಮೂಲ್ಯ, ಜೆನಿತ, ಶಾಲಿನಿ, ಬಿಜೆಪಿ ಮಂಡಲ ಪ್. ಕಾಯ೯ದಶಿ೯ ರಂಜಿತ್ ಪೂಜಾರಿ, ಜಿಲ್ಲಾ ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಸದಸ್ಯ ಸುನಿಲ್ ಪಣಪಿಲ, ಹಿಂದುಳಿದ ವಗ೯ದ ಉಪಾಧ್ಯಕ್ಷರಾದ ಅಶ್ವಥ್ ಪಣಪಿಲ, ಬಿಜೆಪಿ ಮುಖಂಡರಾದ ಸುಧಾಕರ ಡಿ. ಪೂಜಾರಿ, ವಿಹಿಂಪದ ಪ್ರಮುಖರಾದ ಹರೀಶ್ ಪಣಪಿಲ, ಬೂತ್ ಸಮಿತಿ ಅಧ್ಯಕ್ಷರಾದ ರಾಮಪ್ಪ ಮೂಲ್ಯ, ಬಿಜೆಪಿ ಮುಖಂಡರಾದ ಕೃಷ್ಣಪ್ಪ ದಾಬ್ರಿಹಿತ್ಲು, ಸ್ಥಳೀಯರಾದ ರವಿ ಪೂಜಾರಿ ಈ ಸಂದಭ೯ದಲ್ಲಿದ್ದರು.
0 Comments