ಧರ್ಮಸ್ಥಳ ವಿರುದ್ಧದ ಪಿತೂರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಖಂಡನೆ

ಜಾಹೀರಾತು/Advertisment
ಜಾಹೀರಾತು/Advertisment

 ಧರ್ಮಸ್ಥಳ ವಿರುದ್ಧದ ಪಿತೂರಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ  ಖಂಡನೆ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕಳೆದ 12 ವರ್ಷಗಳಿಂದ   ವಿವಿಧ ರೂಪಗಳಲ್ಲಿ  ಅಪಪ್ರಚಾರವನ್ನು ಮಾಡುತ್ತಿರುವವರು ಯಾವುದೇ ಸಾಕ್ಷಿ ಇದ್ದರೆ ಡಿಸೆಂಬರ್ 31ರ ಒಳಗೆ ಕೊಡಬೇಕು, ಇಲ್ಲದಿದ್ದಲ್ಲಿ ಎಸ್.ಐ.ಟಿ.ಯ ವರದಿಯನ್ನು ಶೀಘ್ರವೇ ಪಡೆದು ಎಲ್ಲಾ ಊಹಾಪೋಹಗಳಿಗೆ ಶೀಘ್ರವೇ ತೆರೆ ಎಳೆಯಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಅವರು ಆಗ್ರಹಿಸಿದ್ದಾರೆ.


 ಅವರು ಮೂಡುಬಿದಿರೆಯ ಸಂಪಿಗೆಯ ರೆಸಾಟ್೯ವೊಂದರಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಧಮ೯ಸ್ಥಳದ ಬಗ್ಗೆ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿದರು.


 ಪದೇಪದೇ ಸುಳ್ಳನ್ನು ಹೇಳಿ ಸತ್ಯ ಎಂಬಂತೆ ಬಿಂಬಿಸುವ ಪ್ರಯತ್ನಗಳನ್ನು ಪ್ರತಿಭಟನಾಕಾರರು ಮಾಡುತ್ತಿದ್ದಾರೆ. ಧರ್ಮಸ್ಥಳದ ವಿರುದ್ಧ ಇಂತಹ ಷಡ್ಯಂತ್ರಗಳು ಯಶಸ್ವಿಯಾಗುವುದಿಲ್ಲ. ಸಾಕ್ಷ್ಯ ಸಲ್ಲಿಸಲು ವಿಫಲರಾದರೆ ಎಲ್ಲಾ ಆರೋಪಗಳು ಸುಳ್ಳು ಎಂದು ರಾಜ್ಯ ಗೃಹ ಸಚಿವರು ಅಧಿಕೃತವಾಗಿ ಘೋಷಿಸಬೇಕು. ಈ ಬಗ್ಗೆ ತಾವು ರಾಜ್ಯ ಮತ್ತು ಕೇಂದ್ರ ಗೃಹ ಸಚಿವವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.


  ಧಮ೯ಸ್ಥಳ ದೇವಸ್ಥಾನ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಯಾರು ಕೂಡಾ ನಂಬಬಾರದು. ದೇವಸ್ಥಾನವು ಭಾರತದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು ಕನಾ೯ಟಕದ ಭಕ್ತರು ಕಳೆದ ಸಾವಿರ ವರುಷಗಳಿಂದ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ ಈ ನಂಬಿಕೆಯನ್ನು ಶಾಶ್ವತವಾಗಿ ಉಳಿಸುವಂತೆ ಮನವಿ ಮಾಡಿದ ಅವರು ಸೌಜನ್ಯಳಿಗೂ ನ್ಯಾಯ ಸಿಗಲಿ ಎಂದು ಆಶಿಸಿದರು.

ರಾಜ್ಯ ಸಂಚಾಲಕ ಕೆ.ಪಿ. ಜಗದೀಶ ಅಧಿಕಾರಿ, ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಮಾಣಿಗುತ್ತು ರಾಜೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಜಿ.ಟಿ. ಆಚಾರ್ಯ, ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.

Post a Comment

0 Comments