ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ನಿಂದ ಚಿಕಿತ್ಸೆಗೆ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ನಿಂದ ಚಿಕಿತ್ಸೆಗೆ ನೆರವು

ಮೂಡುದಿರೆ : ಕಳೆದ ಮೂರು ತಿಂಗಳಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ತಾಲೂಕಿನ ಮೂಡುಮಾರ್ನಾಡ್ ಗ್ರಾಮದ ಬಿಜತೈಲ್ ಪರಿಸರದ ರಮೇಶ್ ಪೂಜಾರಿ ಅವರ ಚಿಕಿತ್ಸೆಗೆ ಸಾಯಿ ಮಾನಾ೯ಡ್ ಸೇವಾ ಸಂಘ ಟ್ರಸ್ಟ್ ಅಮನಬೆಟ್ಟು ಪಡುಮಾನಾ೯ಡು ಇದರ 77ನೇ ಸೇವಾ ಯೋಜನೆಯ ಸೆಪ್ಟೆಂಬರ್ ತಿಂಗಳ ಮೊದಲ ಯೋಜನೆಯ ನೆರವು ನೀಡಿದೆ.


ಮೂಡುಮಾರ್ನಾಡ್ ಗ್ರಾಮದ ರಮೇಶ್ ಪೂಜಾರಿ ಎಂಬವರು  ಹೃದಯ ಸಂಬಂದಿ ಕಾಯಿಲೆ ಯಿಂದ ಬಳಲುತ್ತಿದ್ದು 1ತಿಂಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.  ಬಡ ಕುಟುಂಬದವರಾಗಿರುವ ಇವರಿಗೆ  8ವರ್ಷದ ಹೆಣ್ಣು ಮಗುವಿದೆ. ಹೆಂಡತಿ ಇವರನ್ನು ನೋಡಿಕೊಳ್ಳುತ್ತಿದ್ದಾರೆ. ಮನೆಯ ಆಧಾರ ಸ್ತಂಬವಾಗಿದ್ದ ರಮೇಶ್ ಅವರು ಕೆಲಸಕ್ಕೆ ಹೋಗದೆ ಹಾಸಿಗೆಯಲ್ಲಿ ಇರುವುದರಿಂದ ಇವರ ಮನೆಯ ದೈನಂದಿನ ಖರ್ಚು ಹಾಗೂ ಆಸ್ಪತ್ರೆಯ ಖರ್ಚು ಬರಿಸಲು ಇವರಿಗೆ ಕಷ್ಟ ವಾಗಿರುವುದರಿಂದ ಇವರಿಗೆ ಸಾಯಿ ಮಾನಾ೯ಡ್ ಸೇವಾ ಸಂಘ ರೂ. 10,000  ಚೆಕ್ಕನ್ನು ಭಾನುವಾರ ಹಸ್ತಾಂತರಿಸಿದೆ.

Post a Comment

0 Comments