ಮೂಡುಬಿದಿರೆಯಲ್ಲಿ ಬಿಜೆಪಿ ಯುವ ಮೋಚಾ೯ದಿಂದ ರಕ್ತದಾನ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆಯಲ್ಲಿ ಬಿಜೆಪಿ ಯುವ ಮೋಚಾ೯ದಿಂದ ರಕ್ತದಾನ ಶಿಬಿರ


*53 ಯುನಿಟ್ ರಕ್ತ ಸಂಗ್ರಹ

ಮೂಡುಬಿದಿರೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನದ ಅಂಗವಾಗಿ ಬಿಜೆಪಿ ಮುಲ್ಕಿ -ಮೂಡುಬಿದಿರೆ ಮಂಡಲದ ಯುವ ಮೋಚಾ೯ದಿಂದ ಬುಧವಾರ ವಿದ್ಯಾಗಿರಿಯ ಬಿಜೆಪಿ ಕಾಯಾ೯ಲಯದಲ್ಲಿ ನಡೆದ ಬ್ರಹತ್ ರಕ್ತದಾನ ಶಿಬಿರದಲ್ಲಿ 53 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.

ಕ್ಷೇತ್ರದ  ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜೀವವನ್ನು ಉಳಿಸುವ ಶ್ರೇಷ್ಠ ದಾನ ರಕ್ತದಾನ.  ಪ್ರಧಾನ ಮಂತ್ರಿಯ ಜನ್ಮ ದಿನಾಚರಣೆಯ ಅಂಗವಾಗಿ ಬಿಜೆಪಿ ಮಂಡಲದ ವತಿಯಿಂದ ಹಲವು ಕಾಯ೯ಕ್ರಮಗಳನ್ನು ಆಯೋಜಿಸುತ್ತಿದೆ. ಹಲವು ಬಾರಿ ಜೀವವನ್ನು ಉಳಿಸಲು ಅಗತ್ಯವಾಗಿ ಬೇಕಾಗಿರುವ ರಕ್ತದ ಕೊರತೆ ಕಂಡು ಬರುತ್ತದೆ ಇದನ್ನು ನೀಗಿಸುವ  ನಿಟ್ಟಿನಲ್ಲಿ ಯುವ ಮೋಚಾ೯ದ ಸೇವಾ ಪಾಕ್ಷಿಕದಡಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು ಸಂಗ್ರಹವಾಗುವ ರಕ್ತವನ್ನು ಆಸ್ಪತ್ರೆಗೆ ನೀಡಲಾಗುವುದು ಎಂದು ಎಂದು ಹೇಳಿದರು.

 

ಯುವ ಮೋಚಾ೯ದ ದ. ಕ. ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರ. ಕಾಯ೯ದಶಿ೯ಗಳಾದ ಭರತ್ ರಾಜ್ ಕೃಷ್ಣಾಪುರ, ಉಮೇಶ್ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ, ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಪ್ರ. ಕಾಯ೯ದಶಿ೯ಗಳಾದ ಹರಿಪ್ರಸಾದ್ ಶೆಟ್ಟಿ, ರಂಜಿತ್ ಪೂಜಾರಿ, ಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್ ತೋಡಾರು, ಕಾಯ೯ದಶಿ೯ಗಳಾದ ಭರತ್ ಶೆಟ್ಟಿ, ಪುರುಷೋತ್ತಮ್ ಶೆಟ್ಟಿಗಾರ್, ಪುರಸಭೆಯ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ನವೀನ್ ಶೆಟ್ಟಿ, ಮುಖಂಡರುಗಳಾದ  ಈಶ್ವರ್ ಕಟೀಲ್, ಕಸ್ತೂರಿ ಪಂಜ, ಬಾಹುಬಲಿ ಪ್ರಸಾದ್, ಸುಕೇಶ್ ಶೆಟ್ಟಿ ಎದಮಾರು, ಲಕ್ಷ್ಮಣ್ ಪೂಜಾರಿ ಮತ್ತಿತರಿದ್ದರು.

Post a Comment

0 Comments