ಭಾಷೆ ಮತ್ತು ಸಂಸ್ಕೃತಿಗೆ ಅವಿನಾವಭಾವ ಸಂಬಂಧವಿದೆ : ಡಾ. ಧನಂಜಯ ಕುಂಬ್ಳೆ

ಜಾಹೀರಾತು/Advertisment
ಜಾಹೀರಾತು/Advertisment

 ಭಾಷೆ ಮತ್ತು ಸಂಸ್ಕೃತಿಗೆ ಅವಿನಾವಭಾವ ಸಂಬಂಧವಿದೆ : ಡಾ. ಧನಂಜಯ ಕುಂಬ್ಳೆ

ಮೂಡುಬಿದಿರೆ : ಭಾಷೆ ಎನ್ನುವುದು ಒಂದು ಸಂಸ್ಕೃತಿಯ ಶರೀರ. ಮನುಷ್ಯನ ಶರೀರ ಮತ್ತು ಅದರ ಒಳಗಿರುವ ಜೀವಕ್ಕೆ ಹೇಗೆ ಅವಿನಾವಭಾವ ಸಂಬಂಧವಿದೆಯೋ ಹಾಗೆ ಭಾಷೆ ಮತ್ತು ಸಂಸ್ಕೃತಿಗಿದೆ ಎಂದು ಮಂಗಳೂರು ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ  ಹೇಳಿದರು.

ಅವರು ಇಲ್ಲಿನ ಸಮಾಜ ಮಂದಿರ ಸಭಾ(ರಿ)ದ ವತಿಯಿಂದ  ನಡೆಯುತ್ತಿರುವ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಎರಡನೇ ದಿನವಾಗಿರುವ ಮಂಗಳವಾರದಂದು ' ಭಾಷೆ ಮತ್ತು ಸಂಸ್ಕೃತಿ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. 


 ಬಹುಭಾಷೆ ಮತ್ತು ಬಹು ಸಂಸ್ಕೃತಿಗಳು ಈ ದೇಶದ ಬಹುದೊಡ್ಡ ಆಸ್ತಿ. ಅದರಂತೆ ತಾಯಿನುಡಿ, ಮಾತೃಭಾಷೆ ಎನ್ನುವುದಕ್ಕೆ ಬಹಳ ದೊಡ್ಡ ಗೌರವವಿದೆ. ದೇಶದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತಾಯಿನುಡಿಯನ್ನು ರಕ್ಷಿಸುವಲ್ಲಿ ಮಹತ್ತರವಾದ ಪಾತ್ರವಿದೆ ಎಂದರು.

 ನ್ಯೂ ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ನಿದೇ೯ಶಕ ಚಂದ್ರಶೇಖರ್ ರಾಜೇ ಅರಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾತೃಭಾಷೆಯಲ್ಲಿಓದುವ ವಿದ್ಯಾಥಿ೯ಗಳು ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುತ್ತಾರೆ ಆದ್ದರಿಂದ ಅವರು ಜೀವನದಲ್ಲಿ ಸೋಲುವುದಿಲ್ಲ. ಭಾಷೆ ಮತ್ತು ಸಂಸ್ಕೃತಿ ಯುವಜನತೆಯನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು. 


 ಗೌರವ ಪುರಸ್ಕಾರ : ಸಮಾಜ ಮಂದಿರದ ಸಭಾದ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 

ವೇ.ಮೂ ಎಂ. ಹರೀಶ್ ಭಟ್ (ಧಾರ್ಮಿಕ), ಆಡ್ಲಿನ್ ಜೆ. ಜತನ್ನ (ಶಿಕ್ಷಣ), ಗೌರಾ ಗೋವರ್ಧನ್ (ಶಿಕ್ಷಣ, ಸಾಹಿತ್ಯ), ಹರ್ಷವರ್ಧನ್ ಪಡಿವಾಳ್ (ಆಹಾರ ಉದ್ಯಮ) ಪಿ.  ಡಾ ರವಿ ಕೋಟ್ಯಾನ್ (ಛಾಯಾಗ್ರಹಣ)  ಯಶವಂತ ಎಂ.ಜಿ. (ಸಂಗೀತ), ಅವರಿಗೆ ಗೌರಪ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

  ದಸರಾ ಉತ್ಸವದ ಸಂಚಾಲಕ ಗಣೇಶ್ ಕಾಮತ್ ಎಂ. ಸ್ವಾಗತಿಸಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

  ನಝತರ ಮಯೂರ ಪ್ರತಿಷ್ಠಾನ (ರಿ) ಮಂಗಳೂರು ಇವರಿಂದ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಹಾಗೂ ರಕ್ಷಿತ್ ಪಡ್ರೆ ನಿದೇ೯ಶನದ 'ಪಾದ ಪ್ರತೀಕ್ಷಾ' ಯಕ್ಷಗಾನ ಪ್ರದಶ೯ನಗೊಂಡಿತು. ರವಿಪ್ರಸಾದ್ ಕೆ. ಶೆಟ್ಟಿ ಲಾಡಿ ಅವರ ಸಹಕಾರ ನೀಡಿದರು.

Post a Comment

0 Comments