ನಾಪತ್ತೆಯಾಗಿದ್ದ ವಿವಾಹಿತೆ ಯುವಕನೊಂದಿಗೆ ಮೂಡುಬಿದಿರೆ ಪೊಲೀಸರ ವಶಕ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ನಾಪತ್ತೆಯಾಗಿದ್ದ ವಿವಾಹಿತೆ ಯುವಕನೊಂದಿಗೆ ಮೂಡುಬಿದಿರೆ ಪೊಲೀಸರ ವಶಕ್ಕೆ


ಮೂಡುಬಿದಿರೆ: ಕಾರ್ಕಳ ತಾಲೂಕಿನಿಂದ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆಯು ಯುವಕನೊಂದಿಗೆ ಮೂಡುಬಿದಿರೆಯಲ್ಲಿ ಪತ್ತೆಯಾಗಿದ್ದು ಇಬ್ಬರನ್ನೂ ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದು ನಂತರ ಕಾಕ೯ಳ ಗ್ರಾಮಾಂತರ ಠಾಣೆಗೆ ಹಸ್ತಾಂತರಿಸಿದ್ದಾರೆ. 


ಕಾಕ೯ಳದ ವಿವಾಹಿತೆ, ಇಬ್ಬರು ಪುಟ್ಟ ಮಕ್ಕಳ ತಾಯಿ ಮಂಗಳವಾರ ಬೆಳುವಾಯಿಯಿಂದ ನಾಪತ್ತೆಯಾಗಿದ್ದು ಈ ಬಗ್ಗೆ ಕಾಕ೯ಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

  ಬುಧವಾರ ಮಧ್ಯಾಹ್ನದ ವೇಳೆಗೆ ಆಕೆ ಪಾಲಡ್ಕದ 23ರ ಹರೆಯದ ಯುವಕ ಪ್ರಮೋದ್ ಎಂಬಾತನೊಂದಿಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಬಸ್ ನಿಲ್ದಾಣದಲ್ಲಿ  ವಶಕ್ಕೆ ಪಡೆದುಕೊಂಡಿದ್ದರು.

Post a Comment

0 Comments