ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದ್ದೇ ದಬಾ೯ರ್ *ಬಸ್ಸುಗಳ ನಿಲುಗಡೆಗೆ ಜಾಗದ ಸಮಸ್ಯೆ

ಜಾಹೀರಾತು/Advertisment
ಜಾಹೀರಾತು/Advertisment

 ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳದ್ದೇ ದಬಾ೯ರ್ 

*ಬಸ್ಸುಗಳ ನಿಲುಗಡೆಗೆ ಜಾಗದ ಸಮಸ್ಯೆ

ಮೂಡುಬಿದಿರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಾವ೯ಜನಿಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಪಾಕಿ೯ಂಗ್ ಮಾಡುತ್ತಿರುವುದರಿಂದ ಇಲ್ಲಿ ಬಸ್ಸು ನಿಲುಗಡೆಗೆ ಜಾಗವಿಲ್ಲದೆ ಸಮಸ್ಯೆಯುಂಟಾಗುತ್ತಿದೆ. 

  

ಇಂದಿರಾಗಾಂಧಿ ವಾಣಿಜ್ಯ ಸಂಕೀಣ೯ದ ಮುಂಭಾಗ ಶಿತಾ೯ಡಿ, ಇರುವೈಲು

ಬಸ್ಸು ನಿಲುಗಡೆಯ ಜಾಗದಲ್ಲಿ ಸಾವ೯ಜನಿಕರು ತಮ್ಮ ದ್ವಿಚಕ್ರ ವಾಹನ, ಕಾರು ಹಾಗೂ ಆಮ್ನಿಗಳನ್ನು ತಂದು ನಿಲ್ಲಿಸುವುದರಿಂದ ಬಸ್ಸುಗಳಿಗೆ ನಿಲ್ಲಲು ಸರಿಯಾಗಿ ಜಾಗ ಇಲ್ಲದಂತಹ ಪರಿಸ್ಥಿತಿ ಉಂಟಾಗಿ ಬಸ್ಸುಗಳು ಅಡ್ಡಾದಿಡ್ಡಿಯಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.


ಇಲ್ಲಿ ಹಲವು ವಷ೯ಗಳಿಂದ ಪಾಕಿ೯ಂಗ್ ಸಮಸ್ಯೆಯಿದೆ. ಪುರಸಭಾ ಅಧಿಕಾರಿಗಳು ಮತ್ತು ಪೊಲೀಸರು ಇಲ್ಲಿ ಸ್ಥಳ ತನಿಖೆ ಮಾಡಿ ಬಸ್ಸುಗಳು ನಿಲ್ಲಲು ಜಾಗ ಗುರುತಿಸಿದ್ದರೂ ಬಸ್ಸುಗಳು ಇಲ್ಲದಾಗ ಸಾವ೯ಜನಿಕರು ತಮ್ಮ ವಾಹನಗಳನ್ನು  ಅಲ್ಲಿಯೇ ಪಾರ್ಕಿಂಗ್ ಮಾಡಿ  ಬಸ್ಸುಗಳು ನಿಲ್ಲದಂತೆ ಮತ್ತು ಇತರ ವಾಹನಗಳು ಆಚೆ ಈಚೆ ಹೋಗದಂತೆ, ನಿಲ್ಲಿಸಿರುವ ವಾಹನಗಳನ್ನು ತೆಗೆಯಲು ಆಗದಂತೆ ಪಾಕಿ೯ಂಗ್ ಮಾಡಿ ಹೋಗಿರುತ್ತಾರೆ. ಕೆಲವರು ಬೆಳಿಗ್ಗೆ ಪಾಕಿ೯ಂಗ್ ಮಾಡಿ ಕೆಲಸಕ್ಕೆ ಹೋಗುವವರು ಮತ್ತೆ ಗಾಡಿ ತೆಗೆಯುವುದು ಸಂಜೆಯ ನಂತರವೇ.

ವಾಣಿಜ್ಯ ಸಂಕೀರ್ಣದಲ್ಲಿರುವ ಆಫೀಸ್ ಗಳಿಗೆ ವ್ಯವಹಾರ ನಡೆಸಲು ಬರುವವರು ತಮ್ಮ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ದಾರಿ ಮಧ್ಯೆಯೇ ತಂದು ನಿಲ್ಲಿಸುವುದರಿಂದಲಕ ಪಾಕಿ೯ಂಗ್ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.

 

ಈ ಸಮಸ್ಯೆ ಬಗೆಹರಿಯಬೇಕಾದರೆ ಪುರಸಭೆ, ಪೊಲೀಸ್ ಇಲಾಖೆ ಜಂಟಿಯಾಗಿ ಕತ೯ವ್ಯ ನಿವ೯ಹಿಸುವ ಅನಿವಾರ್ಯತೆಯಿದೆ.


Post a Comment

0 Comments