ಪ್ರಿಯದರ್ಶಿನಿ ಸೊಸೈಟಿಯ ನೂತನ ಶಾಖೆ ಮೂಡುಬಿದಿರೆಯಲ್ಲಿ ಆರಂಭ
*ದ. ಕ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ಲಾಭದಾಯಕ : ಎಂ. ಎನ್. ರಾಜೇಂದ್ರ ಕುಮಾರ್
ಮೂಡುಬಿದಿರೆ: ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಪ್ರಗತಿಯಲ್ಲಿದೆ. ದ. ಕ. ಜಿಲ್ಲೆಯಲ್ಲೂ ಸಹಕಾರಿ ಬ್ಯಾಂಕುಗಳು ಲಾಭದಾಯಕವಾಗಿವೆ ಎಂದು ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.
ಅವರು ಮೂಡುಬಿದಿರೆಯಲ್ಲಿ ನೂತನವಾಗಿ ಆರಂಭಿಸಿರುವ ಪ್ರಿಯದರ್ಶಿನಿ ಸೊಸೈಟಿಯ ಮೂಡುಬಿದಿರೆ ಶಾಖೆಯನ್ನು ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದರು.
ಸೊಸೈಟಿ ಬ್ಯಾಂಕ್ ಸ್ಥಾಪನೆ ಸುಲಭ,ಮುಂದುವರಿಸಿಕೊಂಡು ಹೋಗೋದು ಕಷ್ಟವಿದೆ ಆದರೂ ಎಲ್ಲಾ ಕಡೆಯಲ್ಲೂ ಇರುವ ಬ್ಯಾಂಕುಗಳು ಅಭಿವೃದ್ಧಿಯಲ್ಲಿದೆ ಎಂದ ಅವರು ವಸಂತ್ ಬೆರ್ನಾರ್ಡ್ ಅಧ್ಯಕ್ಷರಾಗಿರುವ ಪ್ರಿಯದರ್ಶಿನಿ ಸೊಸೈಟಿಯ ನಾಲ್ಕನೇ ಶಾಖೆ ಇದಾಗಿದ್ದು ಅತಿವೇಗದಲ್ಲೇ ಹತ್ತನೇ ಶಾಖೆ ಉದ್ಘಾಟನೆಯಾಗಲಿ ಎಂದು ಆಶಿಸಿದರು.
ಮುಲ್ಕಿ ಅರಮನೆಯ ದುಗ್ಗಣ್ಣ ಸಾವಂತರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಾಜಿ ಸಚಿವರಾದ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ,ಡಾ.ಎಂ.ಮೋಹನ ಆಳ್ವ,ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಚೌಟರ ಅರಮನೆಯ ಕುಲದೀಪ್ ಎಂ, ಕ್ರಿಸ್ತ ಶಾಂತಿ ಚರ್ಚ್ ನ ಸಂತೋಷ್ ಕುಮಾರ್,ಸೂರ್ಯಕುಮಾರ್,ಚಿತ್ತರಂಜನ್ ಬೋಳಾರ್,ನ್ಯಾಯವಾದಿ ಶರತ್ ಶೆಟ್ಟಿ,ಹರ್ಷವರ್ಧನ ಪಡಿವಾಳ್, ಪ್ರವೀಣ್ ಕುಮಾರ್, ಕುಮಾರ್ ಪೂಜಾರಿ,ಪುರಂದರ ದೇವಾಡಿಗ,ಇಕ್ಬಾಲ್ ಕರೀಮ್,ಜೊಸ್ಸಿ ಮಿನೇಜಸ್, ದೇವದಾಸ್ ಭಟ್,ಪ್ರತಿಭಾ ಕುಳಾಯಿ,ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್,ಶಾಖಾ ಪ್ರಬಂಧಕರಾದ ಅಭಿಷ್ಠಾ ಜೈನ್,ನಿರ್ದೇಶಕರಾದ ಗಣೇಶ್ ಕುಮಾರ್,ಧನಂಜಯ ಮಟ್ಟು,ಗೌತಮ್ ಜೈನ್,ತನುಜಾ ಶೆಟ್ಟಿ ,ನವೀನ್ ಸಾಲಿಯಾನ್ ಪಂಜ, ಲೆಕ್ಕಿಗರಾದ ಲೋಲಾಕ್ಷಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸೊಸೈಟಿ ಅಧ್ಯಕ್ಷರಾದ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಅಕ್ಷತಾ ಎಂ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
0 Comments