ಶಿಕ್ಷಕರ ದಿನಾಚರಣೆ : ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಾಲ್ವರು ಶಿಕ್ಷಕರಿಗೆ ಸನ್ಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಶಿಕ್ಷಕರ ದಿನಾಚರಣೆ : ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಾಲ್ವರು ಶಿಕ್ಷಕರಿಗೆ ಸನ್ಮಾನ

ಮೂಡುಬಿದಿರೆ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ ಕಾಯ೯ಕ್ರಮದಲ್ಲಿ ನಾಲ್ವರು ಶಿಕ್ಷಕರನ್ನು ಸನ್ಮಾನಿಸಲಾಯಿತು.


 ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ದಿನೇಶ್ ಚೌಟ ಮಾತನಾಡಿ, ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನಗಳ ಧ್ಯೋತಕವಾಗಿದೆ. ಡಾ ರಾಧಾಕೃಷ್ಣ ಅವರ ಜ್ಞಾನ ಮತ್ತು ಸಾಧನೆ ಶಿಕ್ಷಣ ವೃತ್ತಿಯಲ್ಲಿರುವ ನಮಗೆಲ್ಲರಿಗೂ ಮಾದರಿ. ಇಂದು ನನ್ನ ಶಿಷ್ಯರಲ್ಲೊಬ್ಬರಾದ ಯುವರಾಜ ಜೈನರ ಸಾಧನೆ ನನಗೆ ಅತ್ಯಂತ ಸಂತಸವನ್ನುಂಟು ಮಾಡಿದೆ. ಅವರ ಸಾಧನೆ ಇತರರಿಗೂ ಪ್ರೇರಣೆಯಾಗಲಿ ಎಂದರು. 


ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಮಾತನಾಡಿ ,  ಒಳ್ಳೆಯ ಗುರುವನ್ನು ಪಡೆಯಲು ಹಾಗೂ ಒಳ್ಳೆಯ ಶಿಷ್ಯವೃಂದವನ್ನು ಪಡೆಯಲು ಯೋಗ ಬೇಕು. ನಾನು ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದಾಗ ನನಗೆ ಪಾಠ ಮಾಡಿದ ಗುರುಗಳೇ ನನ್ನ ಸಹೋದ್ಯೋಗಿಗಳಾಗಿದ್ದರು. ಈ ರೀತಿ ನಮ್ಮ ವಿಭಾಗದಲ್ಲಿ ನಾಲ್ಕು ತಲೆಮಾರುಗಳ ಗುರು ಶಿಷ್ಯ ಪರಂಪರೆ ಇತ್ತು. ನನ್ನನ್ನು ಆ ಸಂದರ್ಭದಲ್ಲಿ ಕೈ ಹಿಡಿದು ನಡೆಸಿದ ಗುರುಗಳಿಗೆ ನಾನು ಋಣಿ ಎಂದರು.


ಸನ್ಮಾನ : ಮೂಡುಮಾರ್ನಾಡು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಡಾ. ರಾಜಶ್ರೀ ಬಿ., ರಾಷ್ಟ್ರಮಟ್ಟದ ವಿಕಸನ ತರಬೇತುದಾರ,  ಪ್ರಶಸ್ತಿ ವಿಜೇತ ಶಿಕ್ಷಕ  ರಾಜೇಂದ್ರ ಭಟ್ , ಉಜಿರೆ ಎಸ್.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕ ಗಜಾನನ ಆರ್. ಭಟ್ ಹಾಗೂ ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ನಂದಾ ಕುಮಾರಿ ಕೆ.ಪಿ ಅವರನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.


ಮನೋರಮಾ ಸಂಸ್ಥೆಯ ಮಾಸ ಪತ್ರಿಕೆಯನ್ನು ಬಿಡುಗಡೆಯಾಯಿತು. 100 ಅಂಕ ತೆಗೆದ ವಿಷಯವಾರು ಶಿಕ್ಷಕರನ್ನು ಮತ್ತು ಉಪನ್ಯಾಸಕರನ್ನು ಪುರಸ್ಕರಿಸಲಾಯಿತು. 

ಕಾರ್ಯದರ್ಶಿ ರಶ್ಮಿತಾ ಜೈನ್ , ಪದವಿಪೂರ್ವ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಸಿಬಿಎಸ್ಸಿ ಶಾಲೆಯ ಪ್ರಾಂಶುಪಾಲ ಶ್ರೀ ಪ್ರಸಾದ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್, ಯಶಸ್ವಿನಿ ಮತ್ತು ದಿವ್ಯಾಲಕ್ಷ್ಮಿ ನಿರೂಪಿಸಿದರು.

Post a Comment

0 Comments