ಅನಾರೋಗ್ಯ ಪೀಡಿತ ಇಬ್ಬರ ಚಿಕಿತ್ಸೆಗೆ ತುಳುನಾಡ ಜವನೆರ್ ಟ್ರಸ್ಟ್ ನಿಂದ ಚೆಕ್ ಹಸ್ತಾಂತರ
ಮೂಡುಬಿದಿರೆ: ಅನಾರೋಗ್ಯದಿಂದಿರುವ ಇಬ್ಬರ ವೈದ್ಯಕೀಯ ಚಿಕಿತ್ಸೆಗಾಗಿ ತುಳುನಾಡ ಜವನೆರ್ ಬೆದ್ರ ಟ್ರಸ್ಟ್ ವತಿಯಿಂದ 65,400ರ ಧನ ಸಹಾಯದ ಚೆಕ್ಕನ್ನು ಭಾನುವಾರ ಸಮಾಜ ಮಂದಿರದಲ್ಲಿ ಹಸ್ತಾಂತರಿಸಲಾಯಿತು.
ಕಿಡ್ನಿ ವೈಫಲ್ಯಗೊಂಡಿರುವ ನಾಗರಕಟ್ಟೆಯ ಕೃಷ್ಣಪ್ಪ ಅವರಿಗೆ ರೂ. 37,700 ಹಾಗೂ ಕ್ಯಾನ್ಸರ್ ಗೆ ತುತ್ತಾಗಿರುವ ಬನ್ನಡ್ಕದ ಜಯಂತಿ ಅವರ ಚಿಕಿತ್ಸೆಗೆ ರೂ 27,700ರ ಚೆಕ್ಕನ್ನು ನೀಡಲಾಯಿತು.
ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಸರ್ವೋದಯ ಫ್ರೆಂಡ್ಸ್ ನ ಅಧ್ಯಕ್ಷ ಗುರು ದೇವಾಡಿಗ, ವಕೀಲೆ ಸುಚಿತಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಮಮತಾ ಕುಲಾಲ್, ನಿಶಾ ಕುಮಾರಿ ಇರುವೈಲು ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.
ವಷಿ೯ಣಿ ಕುಲಾಲ್ ಕಾಯ೯ಕ್ರಮ ನಿರೂಪಿಸಿದರು.
0 Comments