ಕ್ರೈಸ್ತ ಬಾಂಧವರಿಂದ ಮೂಡುಬಿದಿರೆಯಲ್ಲಿ ಮೋಂತಿ ಫೆಸ್ತ್ ಆಚರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಕ್ರೈಸ್ತ ಬಾಂಧವರಿಂದ ಮೂಡುಬಿದಿರೆಯಲ್ಲಿ ಮೋಂತಿ ಫೆಸ್ತ್ ಆಚರಣೆ

ಮೂಡುಬಿದಿರೆ: ನಾಡಿನೆಲ್ಲೆಡೆ ಇಂದು ಪವಿತ್ರ ಹಬ್ಬವಾದ ತೆನೆಹಬ್ಬವನ್ನು (ಮೊಂತಿ ಫೆಸ್ತ್) ಆಚರಿಸುತ್ತಿದ್ದಾರೆ ಅಂತೆಯೇ ಮೂಡುಬಿದಿರೆ ನಗರದ ಕೋರ್ಪುಸ್ ಕ್ರಿಸ್ತಿ ಚರ್ಚ್ ನಲ್ಲಿ ಸೋಮವಾರ ಬೆಳಿಗ್ಗೆ ಈ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. 

ಮೂಡುಬಿದಿರೆ ಪೇಟೆಯ ಸಮಾಜಮಂದಿರ ವಾಣಿಜ್ಯ ಸಂಕೀರ್ಣ ಎದುರು  ಮೂಡುಬಿದಿರೆ ಚರ್ಚ್ ನ ಧರ್ಮಗುರು  ಒನಿಲ್ ಡಿ. ಸೋಜ ಅವರು ಪ್ರಾಥಿ೯ಸಿ ತೆನೆಗೆ ಪೂಜೆ ಸಲ್ಲಿಸಿದ ನಂತರ ಮುಖ್ಯ ರಸ್ತೆಯಲ್ಲಿ ಸಾಗಿ ಚರ್ಚ್ ವರೆಗೆ ತೆನೆಯನ್ನು ಮೆರವಣಿಗೆಯ ಮೂಲಕ ತಂದು ಚಚ್೯ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.


ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ನೋಬರ್ಟ್ ಮಾರ್ಟಿಸ್, ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಸಹಿತ ನೂರಾರು ಕ್ರೈಸ್ತರು ಭಾಗವಹಿಸಿದರು.

Post a Comment

0 Comments