ಸೆ. 8ರಂದು ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 ಸೆ. 8ರಂದು ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಸೊಸೈಟಿಯ ನೂತನ ಶಾಖೆ ಉದ್ಘಾಟನೆ

ಮೂಡುಬಿದಿರೆ : ದ.ಕ ಜಿಲ್ಲೆಯ ಮೂಲ್ಕಿ ತಾಲೂಕು ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ, ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿಯಲ್ಲಿ 3 ಶಾಖೆಯನ್ನು ನಡೆಸುತ್ತಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ 4ನೇ ಶಾಖೆಯು ಸೆ. 8ರಂದು ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಜ್ಯೋತಿನಗರ ಮೆಸ್ಕಾಂ ಕಚೇರಿ ಮುಂಭಾಗದ ಮಹಾಲಸ ಕಟ್ಟಡದಲ್ಲಿ  ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷರಾದ  ಎಚ್ ವಸಂತ್ ಬೆರ್ನಾರ್ಡ್ ರವರು ತಿಳಿಸಿದ್ದಾರೆ. 

ಅವರು ಶುಕ್ರವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಸೊಸೈಟಿಯು 2021 ರಲ್ಲಿ ಪ್ರಾರಂಭಗೊಂಡು, ಪ್ರಸ್ತುತ 32 ಕೋಟಿ ನಿರಖು ಠೇವಣಿ ಹೊಂದಿದೆ. 2024-25ನೇ

ಸಾಲಿನಲ್ಲಿ 351.69 ಕೋಟಿ ವಹಿವಾಟು ನಡೆಸಿ, ಉತ್ತಮ ದರ್ಜೆಯ ವ್ಯವಹಾರ ಮಾಡಿ ರೂ. 41.88 ಲಕ್ಷ ಲಾಭವನ್ನು ಗಳಿಸಿರುತ್ತದೆ. ಹಾಗೂ 98.5 % ಸಾಲ ವಸೂಲಾತಿ ನಡೆಸಿ ಲೆಕ್ಕಪರಿಶೋಧನಾ ವರದಿ (ಆಡಿಟ್ ವರದಿ) ಕೂಡಾ "ಎ" ಶ್ರೇಣಿಯಲ್ಲಿದ್ದು. ಹೆಮ್ಮೆ ಪಡುವಂತಾಗಿದೆ. ಸೊಸೈಟಿಯ 3 ಶಾಖೆಗಳಲ್ಲೂ ಇ-ಮುದ್ರಾಂಕ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗವನ್ನು ಹೊಂದಿರುತ್ತದೆ. ಪ್ರಸ್ತುತ ಒಟ್ಟು 3843 ಸದಸ್ಯರನ್ನು ಹೊಂದಿರುತ್ತದೆ. ಸಂಘದಲ್ಲಿ 21 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಒಟ್ಟು 17 ನಿರ್ದೇಶಕರ ತಂಡ ಇದೆ. ಇವರೆಲ್ಲರ ಶ್ರಮದಿಂದಲೇ 2023-24 ಮತ್ತು 2024-25ನೇ ಸಾಲಿನಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧನ ಪ್ರಶಸ್ತಿ ದೊರಕಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಮೂಡುಬಿದಿರೆಯಲ್ಲಿ 4ನೇ ಶಾಖೆಯನ್ನು ತೆರೆಯುತ್ತಿದ್ದು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅ., ಮಂಗಳೂರು ಇದರ ಅಧ್ಯಕ್ಷರಾದ ಡಾ॥ ಎಂ. ಎನ್. ರಾಜೇಂದ್ರ ಕುಮಾರ್ ಇವರು ಉದ್ಘಾಟಣೆಗೊಳಿಸಲಿದ್ದಾರೆ. ಮುಲ್ಕಿ ಸೀಮೆ ಅರಸರು, ಮುಲ್ಕಿ ಅರಮನೆ  ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು, ಕರ್ನಾಟಕ ಸರಕಾರದ ಮಾಜಿ ಸಚಿವರಾದ  ಕೆ. ಅಭಯಚಂದ್ರ ಅವರು ದೀಪ ಪ್ರಜ್ವಲನೆಯನ್ನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ಮಿಥುನ್ ಎಂ ರೈ ಅವರು ಕಂಪ್ಯೂಟರ್ ವ್ಯವಸ್ಥೆ ಚಾಲನೆಯನ್ನು, ಆಳ್ವಾಸ್ ಎಜುಕೇಶನ್ ಟ್ರಸ್ಟ್ (ರಿ), ಮೂಡುಬಿದಿರೆ ಇದರ ಅಧ್ಯಕ್ಷರಾದ ಡಾ|| ಎಮ್. ಮೋಹನ್ ಆಳ್ವ ಅವರು ಭದ್ರತಾ ಕೊಠಡಿ ಉದ್ಘಾಟನೆಯನ್ನು, ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟ  ಇದರ ನಿರ್ದೇಶಕರಾದ ಡಾ|| ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಅವರು ಅಮೃತ ನಗದು ಪತ್ರ ಠೇವಣಿ ಬಿಡುಗಡೆಯನ್ನು, ಮೂಡುಬಿದಿರೆ ಚೌಟರ ಅರಮನೆಯ  ಕುಲದೀಪ್ ಎಮ್ ಅವರು ನಿರಖು ಠೇವಣಿ ಪತ್ರ ಬಿಡುಗಡೆಯನ್ನು, ಮೂಡುಬಿದಿರೆ ವಲಯದ ಪ್ರಧಾನ ಧರ್ಮ ಗುರುಗಳಾದ ರೇ| ಫಾ| ಓನಿಲ್ ಡಿ'ಸೋಜಾ ಉಳಿತಾಯ ಖಾತೆಯ ಪಾಸ್‌ಬುಕ್ ವಿತರಣೆಯನ್ನು, ಸಿಎಸ್‌ಐ ಕ್ರಿಸ್ತ ಕಾಂತಿ ಚರ್ಚ್ ಮೂಡುಬಿದಿರೆ ಇದರ ಸಭಾಪಾಲಕರಾದ ರೇ. ಸಂತೋಷ್ ಕುಮಾರ್ ಅವರು ಮಾಸಿಕ ಠೇವಣಿ ಪತ್ರ ಬಿಡುಗಡೆಯನ್ನು,  ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಪಾವಂಜೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ  ಬಿ.  ಸೂರ್ಯ ಕುಮಾರ್ ಅವರು ಪ್ರಥಮ ವಾಹನ ಸಾಲ ವಿತರಣೆಯನ್ನು, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿ. ಪಡೀಲ್ ಮಂಗಳೂರು ಇದರ ಅಧ್ಯಕ್ಷರಾದ  ಚಿತ್ತರಂಜನ್ ಬೋಳಾರ್ ನಿತ್ಯನಿಧಿ ಪಾಸ್‌ಬುಕ್ ವಿತರಣೆಯನ್ನು, ಮೂಡುಬಿದಿರೆಯ ನ್ಯಾಯಾವಾದಿಗಳಾದ  ಶರತ್ ಡಿ. ಶೆಟ್ಟಿ ಅವರು ಪ್ರಿಯದರ್ಶಿನಿ ಸ್ವ-ಸಹಾಯ ಗುಂಪಿಗೆ ಚಾಲನೆಯನ್ನು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್. ಎನ್. ರಮೇಶ್‌ರವರು, ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ  ಹರ್ಷವರ್ಧನ್ ಪಡಿವಾಳ್ ಅವರು, ಶಿರ್ತಾಡಿ ಸಹಕಾರಿ ವ್ಯವಸಾಯಿಕ ಸಂಘ ಇದರ ಅಧ್ಯಕ್ಷ  ಪ್ರವೀಣ್ ಕುಮಾರ್ ಜೈನ್‌ರವರು, ದೇವಾಡಿಗ ಸುಧಾರಕ ಸೇವಾ ಸಂಘ (ರಿ) ಮೂಡುಬಿದಿರೆ ಇದರ ಅಧ್ಯಕ್ಷರಾದ  ಪುರಂದರ ದೇವಾಡಿಗ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಪುಚ್ಚೆಮೊಗರು ಇರುವೈಲು ಇದರ ಅಧ್ಯಕ್ಷ ಕುಮಾರ್ ಪೂಜಾರಿ, ಲಯನ್ಸ್ ಕ್ಲಬ್ 317D ಇದರ ವಲಯ ಅಧ್ಯಕ್ಷ  ಜೊಸ್ಸಿ ಮೆನೇಜಸ್, ಪುರಸಭೆ ಸದಸ್ಯ ಇಕ್ಲಾಲ್ ಕರೀಂ, ಕಟ್ಟಡ ಮಾಲೀಕ  ದೇವದಾಸ್ ಭಟ್ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ  ಗೋಷ್ಠಿಯಲ್ಲಿ ತಿಳಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕರಾದ ಗೌತಮ್ ಜೈನ್, ಗಣೇಶ್ ಪ್ರಸಾದ್ ದೇವಾಡಿಗ, ನವೀನ್ ಸಾಲಿಯಾನ್ ಪಂಜ, ತನುಜಾ ಶೆಟ್ಟಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ  ಸುದರ್ಶನ್,  ಮೂಡುಬಿದಿರೆ ಶಾಖಾ ಪ್ರಬಂಧಕಿ  ಅಭಿಷ್ಠಾ ಜೈನ್, ಲೆಕ್ಕಾಧಿಕಾರಿ ಲೋಲಾಕ್ಷಿ ಉಪಸ್ಥಿತರಿದ್ದರು.

Post a Comment

0 Comments